ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿಗೆ ಅಧಿಕಾರ ನೆತ್ತಿಗೇರಿದೆ: ರೈತರಿಗೇನು ಹುಚ್ಚು ಹಿಡಿದಿದೆಯಾ?: ಸಿದ್ದರಾಮಯ್ಯ

ಬೀದರ್: ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕ. ರೈತರು ಮೊದಲೇ ಹೋರಾಟದ ಸೂಚನೆ ನೀಡಿದ್ದರು. ಹಾಗಾಗಿ, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಜನರ ಮೂಲಭೂತ ಹಕ್ಕು. 2 ತಿಂಗಳಿನಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ರೈತರ ಸಮಸ್ಯೆ ಇವತ್ತಿನವರೆಗೂ ಬಗೆಹರಿದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಹುಮನಾಬಾದಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 11 ಸುತ್ತಿನ ಮಾತುಕತೆ ನಡೆದಿದೆ. ಕೇಂದ್ರದವರು ಕಾಟಾಚಾರಕ್ಕೆ ಮಾತುಕತೆಗೆ ಕರೆದಿದ್ದರು. 60 ದಿನ ಚಳುವಳಿ ಮಾಡೋಕೆ ರೈತರಿಗೇನು ಹುಚ್ಚು ಹಿಡಿದಿದೆಯಾ? ಸುಪ್ರೀಂ ಕೋರ್ಟ್​ನವರೇ ಆ 3ಕಾಯ್ದೆಗಳಿಗೆ ಸ್ಟೇ ಕೊಟ್ಟಿದ್ದಾರೆ. ಆ ಕಾಯ್ದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತಿಭಟನಾಕಾರರು ಭಯೋತ್ಪಾದಕರು, ಕಾಂಗ್ರೆಸ್​ನವರು ಎಂಬ ಸಚಿವ ಬಿ.ಸಿ ಪಾಟೀಲ್ ಹೇಳಿಕೆಯನ್ನು ಇದೇ ವೇಳೆ ಖಂಡಿಸಿದ ಸಿದ್ದರಾಮಯ್ಯ, ಸಂವಿಧಾನ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಾರೆ. ಬಿ.ಸಿ. ಪಾಟೀಲ್​ನಂತವರು ಸಚಿವರಾಗಿರುವುದೇ ಈ ದೇಶದ ದುರ್ದೈವ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Edited By : Nagaraj Tulugeri
PublicNext

PublicNext

26/01/2021 06:08 pm

Cinque Terre

98.2 K

Cinque Terre

50

ಸಂಬಂಧಿತ ಸುದ್ದಿ