ಕೋಲ್ಕತ್ತಾ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಸರ್ವರಿಗೂ ಸಮಾನ ನ್ಯಾಯ, ಸಮಾನ ಆದ್ಯತೆ ನೀಡಬೇಕು. ಸಂವಿಧಾನದ ಆಶಯವೂ ಇದೇ ಆಗಿದೆ. ಆದ್ರೆ ನಿನ್ನೆ ಕೋಲ್ಕತ್ತದಲ್ಲಿ ನಡೆದ ನೇತಾಜಿ ಬೋಸ್ ಜಯಂತಿಯಲ್ಲಿ ಮಮತಾ ಬ್ಯಾನರ್ಜಿ ಅವರ ನಡೆ ಇದಕ್ಕೆ ಈ ಮೇಲಿನ ಮಾತಿಗೆ ವ್ಯತಿರಿಕ್ತವಾಗಿದೆ.
ನಡೆದಿದ್ದೇನೆಂದರೆ ಕೇಂದ್ರ ಸರ್ಕಾರದಿಂದ ಕೋಲ್ಕತ್ತದಲ್ಲಿ ನಿನ್ನೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರನ್ನೂ ಆಹ್ವಾನಿಸಲಾಗಿತ್ತು. ತಮ್ಮ ಭಾಷಣ ಆರಂಭಿಸುವ ಮುನ್ನ ಅಲ್ಲಿದ್ದ ಸಾರ್ವಜನಿಕರು ಜೈ ಶ್ರೀರಾಮ್ ಎಂದು ಕೂಗಿದ್ದಾರೆ.
ಇದರಿಂದ ಅಸಮಾಧಾನಿತರಾದ ದೀದಿ, ನೋಡಿ...ಇದು ಸರ್ಕಾರದಿಂದ ಆಯೋಜಿತವಾದ ಕಾರ್ಯಕ್ರಮ. ಹೀಗೆ ಆಹ್ವಾನ ಕೊಟ್ಟು ಅವಮಾನ ಮಾಡುವುದು ತರವಲ್ಲ. ಸರ್ಕಾರದ ಕಾರ್ಯಕ್ರಮಗಳಿಗೆ ಘನತೆ ಇರುತ್ತದೆ. ಪ್ರಧಾನಿಗಳು ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯವು ಕೋಲ್ಕತ್ತಾದಲ್ಲಿ ಇಂತಹ ಕಾರ್ಯಕ್ರಮ ಮಾಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಹೀಗಾಗಿ ನಾನು ಏನನ್ನೂ ಹೇಳಲಾರೆ.
ಹೀಗೆಂದ ಮಮತಾ ಬ್ಯಾನರ್ಜಿ ವೇದಿಕೆಯಿಂದ ಕೆಳಗಿಳಿದರು. ಅಲ್ಲಿ ನೆರೆದಿದ್ದ ಸಾರ್ವಜನಿಕರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದು ಮಮತಾ ಅವರ ಈ ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಎಲ್ಲ ಘಟನಾವಳಿಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ಮಮತಾ ಅವರ ಹಳೆಯ ವಿಡಿಯೋ ಒಂದನ್ನು ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಇದಕ್ಕೂ ಮುನ್ನ ಬಂಗಾಳ ಸಿಎಂ ಮಮತಾ ಅವರು ತೆರೆದ ವೇದಿಕೆಯಲ್ಲೇ ಮುಸ್ಲಿಂ ಸಮುದಾಯದ ಪ್ರಾರ್ಥನೆ ಹೇಳಿದ್ದರು.
ಈ ಎರಡೂ ವಿಡಿಯೋಗಳ ಬಗ್ಗೆ ಈಗ ಪರ- ವಿರೋಧದ ಚರ್ಚೆ ನಡೆಯುತ್ತಿದೆ.
PublicNext
24/01/2021 09:23 pm