ಮೈಸೂರು: ನಮ್ಮನ್ನ ಹಿಡಿಯುತ್ತಾರೆ, ಹೊಡೆಯುತ್ತಾರೆ ಅಂತ ಬಾಂಬೆಗೆ ಹೋಗಿದ್ದೇವು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿ ಸಚಿವರು, ''ರಾಜ್ಯದಲ್ಲಿ ಆಗ ಭಯಾನಕ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಮುಂಬೈಗೆ ಹೋಗಿದ್ದೇವು. ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ಮಾಧ್ಯಮದವರೇ ನಮಗೆ ಬಾಂಬೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಬಾಂಬೆಗೆ ಹೋಗುವುದಕ್ಕೆ ಇಲ್ಲಿನ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು'' ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಿದಾಗ ಡಾ. ಕೆ.ಸುಧಾಕರ್ ಅವರನ್ನು ಲಿಫ್ಟ್‌ನಲ್ಲಿ ಹಾಕಿ ಹೊಡೆದಿದ್ದರು. ಬಳಿಕ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಆಫೀಸ್‌ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಇದರಿಂದಾಗಿ ನಮಗೆ ಏನಾಗುತ್ತದೋ ಎಂಬ ಹೆದರಿಕೆಯಿಂದ ನಾವು ಮುಂಬೈಗೆ ಹೋಗಿದ್ದೇವು ಎಂದು ತಿಳಿಸಿದರು.
PublicNext
20/01/2021 08:24 am