ಬೆಂಗಳೂರು: ರಾಜ್ಯದ ಹತ್ತು ಪಾಲಿಕೆಗಳ ಪೈಕಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಇನ್ನೂ ಚುನಾವಣಾ ಭಾಗ್ಯ ಕೂಡಿ ಬಂದಿಲ್ಲ. ಕೆಲವು ಪಾಲಿಕೆಗಳಲ್ಲಿ 22 ತಿಂಗಳಿನಿಂದ ಚುನಾಯಿತ ಆಡಳಿತವಿಲ್ಲ. ಪರಿಣಾಮ ಆಡಳಿತಾಧಿಕಾರಿಗಳದೇ ದರ್ಬಾರ್ ನಡೆಯುತ್ತಿದೆ.
ವಾರ್ಡ್ ಪುನರ್ ವಿಂಗಡಣೆ, ಮೀಸಲು ನಿಗದಿ ಸೇರಿದಂತೆ ವಿವಿಧ ಕಾರಣಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರವು ಚುನಾವಣೆ ನಡೆಸದೆ ಕಾಲಹರಣ ಮಾಡುತ್ತಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಜನರು ಕೂಡ ಸಂಕಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳ ಮೂಲಕ ಸ್ಥಳೀಯ ಶಾಸಕರು, ಸಚಿವರು ತಮ್ಮ 'ಅಧಿಕಾರದ ದರ್ಪ' ಮೆರೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ವಿಚಾರಗಳು ನ್ಯಾಯಾಲಯದ ಮುಂದೆ ಬಂದಾಗ ಗಂಭೀರತೆ ಅರಿತ ಸಿಜೆ ಎ.ಎಸ್. ಓಕ್, ಹೈಕೋರ್ಟ್‌ನಿಂದಲೇ ಸ್ವಯಂ ಪಿಐಎಲ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ಸರಕಾರ, ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಬಾಕಿ ಇರುವ 26ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕಾಲಮಿತಿಯಲ್ಲಿ ನಡೆಸುವ ಕುರಿತು ಸರಕಾರದ ವಿವರಣೆಯನ್ನೂ ನ್ಯಾಯಾಲಯ ಕೋರಿದೆ.
PublicNext
18/01/2021 10:54 am