ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್‌ವೈ ಸಿಡಿ ಇದ್ದರೆ ಬಿಡುಗಡೆ ಮಾಡಲಿ: ಎಂಟಿಬಿ ಸವಾಲ್

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ನೂತನ ಸಚಿವ ಎಂಟಿಬಿ ನಾಗರಾಜ್‌ ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,''ಸಿಡಿ ಇದೆ ಅಂತ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹಾಗೂ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಸಿಡಿ ಇಟ್ಟುಕೊಂಡು ಯಾರು ಹೆದರಿಸಿದ್ದಾರೋ ಗೊತ್ತಿಲ್ಲ. ಪ್ರತಿ ದಿನವೂ ಹೆದರಿಸಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ಇದು ಅಂತೆ–ಕಂತೆ ಅಷ್ಟೇ'' ಎಂದು ಹೇಳಿದರು.

ನೂತನ ಸಚಿವರ ಸಿ.ಪಿ.ಯೋಗೇಶ್ವರ ಅವರು ಅತೃಪ್ತರನ್ನು ಒಗ್ಗೂಡಿಸಲು ಸಾಲ ಮಾಡಿದ್ದರು ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅವರು ಯಾವ ಮನೆ, ಮಠವನ್ನೂ ಅಡ ಇಟ್ಟಿಲ್ಲ. ನನ್ನ ಬಳಿಯೂ ಸಾಲ ಪಡೆದಿಲ್ಲ. ಸಚಿವ ರಮೇಶ್‌ ಜಾರಕಿಹೊಳಿ ಸತ್ಯವನ್ನು ಮಾತ್ರ ಹೇಳಬೇಕು. ಹೈಕಮಾಂಡ್ ತೀರ್ಮಾನದಂತೆ ಯೋಗೇಶ್ವರ್ ಸಚಿವರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Edited By : Vijay Kumar
PublicNext

PublicNext

15/01/2021 02:16 pm

Cinque Terre

55.12 K

Cinque Terre

3

ಸಂಬಂಧಿತ ಸುದ್ದಿ