ವಾಷಿಂಗ್ಟನ್: ಎರಡನೇ ಬಾರಿ ಮಹಾಭಿಯೋಗಕ್ಕೆ ಡೊನಾಲ್ಡ್ ಟ್ರಂಪ್ ಗುರಿಯಾಗಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ವಾರ ಅಮೆರಿಕ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯನ್ನು ಪೂರ್ವನಿಯೋಜಿತ ಮತ್ತು ಸಂಘಟಿತ ಕೃತ್ಯವೆಂದು ಬೈಡನ್ ಆರೋಪಿಸಿದ್ದಾರೆ. 'ನಮ್ಮ ಪ್ರಜಾಪ್ರಭುತ್ವದ ಮೇಲೆ ಕಳೆದ ವಾರ ಅನಾಗರಿಕ ದಾಳಿಯಾಗಿದ್ದನ್ನು ನಾವು ನೋಡಿದ್ದೇವೆ. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಇದು ನಮ್ಮ ರಾಷ್ಟ್ರದ 244 ವರ್ಷಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಕೃತ್ಯವಾಗಿತ್ತು' ಎಂದು ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
14/01/2021 09:23 am