ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈವರೆಗೂ ಗೋವು, ಹಂದಿ ಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದ್ರೆ ತಿಂತೀನಿ: ಸಿದ್ದರಾಮಯ್ಯ

ಮೈಸೂರು: ಆಹಾರ ನನ್ನ ಹಕ್ಕು, ಅದನ್ನು ಪ್ರಶ್ನಿಸುವುದಕ್ಕೆ ಇವರು ಯಾರು? ಇಲ್ಲಿಯವರೆಗೆ ನಾನು‌ ಗೋಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಕೋಳಿ, ಕುರಿ, ಆಡಿನ ಮಾಂಸವನ್ನು ಮಾತ್ರ ತಿಂದಿದ್ದೇನೆ. ಆದರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗೋಮಾಂಸ ತಿನ್ನುವುದೇ ಸಾಧನೆ ಅಂತ ಹೇಳಿದ್ದಾನೆ. ಆದರೆ ನಾನೇನು ಅವನ ಥರ ಸೊಪ್ಪು ತಿನ್ನಲೇ? ನಾನು ಸೋಪ್ಪು ಬೇಕು ಅಂದರೆ ಸೋಪ್ಪು ತಿಂತೀನಿ, ಮಾಂಸ ಬೇಕು ಅಂದ್ರೆ ಮಾಂಸ ತಿನ್ನುತ್ತೇನೆ. ನಾನೇನಾದ್ರು ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತಾ? ಮತ್ತೆ ಸುಮ್ಮನೆ ತಿನ್ನುವವರಿಗೆ ಯಾಕೆ ಪ್ರಶ್ನೆ ಮಾಡ್ತೀಯಾ? ಎಂದು ಏಕವಚನದಲ್ಲಿ ಬಿಎಸ್‌ವೈ ವಿರುದ್ಧ ಪರೋಕ್ಷವಾಗಿ ಟಾಂಗ್​ ಕೊಟ್ಟರು.

ಜಗತ್ತಿನಲ್ಲಿ ಮಾಂಸಹಾರಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ‌ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ? ಅಮೆರಿಕ, ಇಂಗ್ಲೆಂಡ್, ಬ್ರಿಟನ್ ಸೇರಿದಂತೆ ವಿವಿಧ ದೇಶದ ಜನರು ದನದ ಮಾಂಸ ತಿನ್ನುತ್ತಾರೆ. ಹಾಗಾದ್ರೆ ಅವರೆಲ್ಲ ಪ್ರಾಣಿಗಳಾ? ನಿಮಗೆ ಸೋಪ್ಪು ಇಷ್ಟ ಇದ್ದರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನು ತಿನ್ನುವುದಕ್ಕೆ ಬಿಡಿ ಎಂದು ಕಿಡಿಕಾರಿದರು.

Edited By : Vijay Kumar
PublicNext

PublicNext

13/01/2021 03:42 pm

Cinque Terre

122.27 K

Cinque Terre

17

ಸಂಬಂಧಿತ ಸುದ್ದಿ