ಬೆಳಗಾವಿ: ಅತಿ ಶೀಘ್ರದಲ್ಲೇ ಗೋಕಾಕ್ ಜಿಲ್ಲೆ ರಚನೆ ಮಾಡಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ
ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಗೋಕಾಕ್ ಜಿಲ್ಲೆ ರಚನೆ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಗೋಕಾಕ್ - ಚಿಕ್ಕೋಡಿ ಜಿಲ್ಕೆ ರಚನೆ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು.
ಈ ನಡುವೆ ಬೈಲಹೊಂಗಲದವರೂ ನಮಗೆ ಪ್ರತ್ಯೇಕ ಜಿಲ್ಲೆ ಕೊಡಿ ಎಂದು ಕೇಳಿದ್ದರು. ಹೀಗಾಗಿ ಆ ವಿಚಾರ ಅಲ್ಲಿಯೇ ನಿಂತಿತ್ತು. ಹೊಸ ತಾಲೂಕುಗಳ ಘೋಷಣೆಯಾದ ನಂತರ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆಗೆ ಸಲಹೆ ನೀಡಲಾಗಿದೆ. ಇದೇ ತಾಂತ್ರಿಕ ಕಾರಣದಿಂದ ಗೋಕಾಕ್ ಜಿಲ್ಲೆಯಾಗುವುದು ಬಾಕಿ ಉಳಿದಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು
PublicNext
04/01/2021 04:01 pm