ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ಮೊದಲ ಬಾರಿಗೆ ಸೊಕ್ಕಿನ ಸರ್ಕಾರ ಅಧಿಕಾರಕ್ಕೆ ಬಂದಿದೆ: ಮೋದಿ ಸರ್ಕಾರದ ವಿರುದ್ಧ ಸೋನಿಯಾ ಕಿಡಿ

ನವದೆಹಲಿ: ದೇಶದಲ್ಲಿ ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಇಂತಹ ಸೊಕ್ಕಿನ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಷ್ಟು ಸುದೀರ್ಘ ಪ್ರತಿಭಟನೆ ನಡೆಸಿದರೂ ಅನ್ನದಾತರ ನೋವಿಗೆ ಬೆಲೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ''ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಭಾವನೆಗಳನ್ನು ನಿರ್ಲಕ್ಷಿಸುವ ಸರ್ಕಾರಗಳು ಮತ್ತು ಅವರ ನಾಯಕರು ಹೆಚ್ಚು ಕಾಲ ಆಡಳಿತ ನಡೆಸಲು ಸಾಧ್ಯವಿಲ್ಲ. ತಂಪು ಗಾಳಿ ಮತ್ತು ಚಳಿ ತಾಳದೆ ಸಾಯುತ್ತಿರುವ ರೈತರ ಆಂದೋಲನವನ್ನು ಕೊನೆಗೊಳಿಸಲು ಪ್ರಧಾನಿ ಮೋದಿ ಸರ್ಕಾರ ಅಧಿಕಾರದ ದುರಹಂಕಾರವನ್ನು ಬಿಟ್ಟು ತಕ್ಷಣವೇ ಮೂರು ಕಪ್ಪು ಕಾನೂನುಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೊಸ ಕೃಷಿ ಕಾನೂನುಗಳನ್ನು ತಕ್ಷಣವೇ ಬೇಷರತ್ತಾಗಿ ಹಿಂಪಡೆಯಬೇಕು. ಪ್ರಜಾಪ್ರಭುತ್ವ ಎಂದರೆ ಜನರ ಮತ್ತು ರೈತ-ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವುದು ಎಂಬುದನ್ನು ಕೇಂದ್ರ ಸರ್ಕಾರ ನೆನಪಿನಲ್ಲಿಡಬೇಕು. ದೆಹಲಿಯ ಗಡಿಯಲ್ಲಿ ಕಳೆದ 39 ದಿನಗಳಿಂದ ಪ್ರಾಣವನ್ನೂ ಲೆಕ್ಕಿಸದೆ ಬೇಡಿಕೆ ಈಡೇರಿಕೆಗೆ ಆಂದೋಲನ ನಡೆಸುತ್ತಿರುವ ಅನ್ನದಾತರ ಸ್ಥಿತಿ ನೋಡಿ ನನಗೆ ದುಃಖವಾಗುತ್ತಿದೆ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

03/01/2021 05:37 pm

Cinque Terre

100.65 K

Cinque Terre

32

ಸಂಬಂಧಿತ ಸುದ್ದಿ