ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ನಡೆದ ನಂತರ ಹೃದಯಾಘಾತದಿಂದ ನಿಧನರಾಗಿದ್ದ ಖಾನಾಪುರ ತಾಲೂಕಿನ ಕಕ್ಕೇರಿಯ ಸಿ.ಬಿ. ಅಂಬೋಜಿ ಗೆಲುವು ಸಾಧಿಸಿದ್ದಾರೆ.
67 ವರ್ಷದ ಸಿ.ಬಿ. ಅಂಬೋಜಿ ಅವರು ವಕೀಲರೂ ಆಗಿದ್ದರು. ಕಕ್ಕೇರಿಯ ಗ್ರಾ.ಪಂ ಚುನಾವಣೆ ಮತದಾನ ಡಿ.22ರಂದು ಮೊದಲ ಹಂತದಲ್ಲಿ ನಡೆದಿತ್ತು. ಆದರೆ ಡಿ.27ರಂದು ಅವರು ನಿಧನರಾಗಿದ್ದರು. ಬುಧವಾರ ಫಲಿತಾಂಶ ಪ್ರಕಟವಾಗಿದ್ದು, ಅವರು 414 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಅಂಬೋಜಿ ಅವರು ಸತತ ಐದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ 4 ಬಾರಿ ಗೆದ್ದಿದ್ದರೆ, ಒಮ್ಮೆ ಸೋಲು ಕಂಡಿದ್ದರು. ಒಮ್ಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು.
PublicNext
30/12/2020 04:21 pm