ನವದೆಹಲಿ: ಭಾರತಕ್ಕೆ ಕೊರೊನಾ ವೈರಸ್ ಕಾಲಿಟ್ಟ ಆರಂಭದಲ್ಲಿ ‘ಗೋ ಕೊರೊನಾ.. ಕೊರೊನಾ ಗೋ’ ಎಂಬ ಘೋಷ ವಾಕ್ಯ ಹೇಳಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದ್ದ ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಈ ಬಾರಿ ಮತ್ತೊಂದು ಹೊಸ ಘೋಷ ವಾಕ್ಯವನ್ನು ರಚಿಸಿ ಘೋಷಿಸಿದ್ದಾರೆ.
ಕೊರೊನಾ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ರಾಮ್‌ದಾಸ್ ಅಠಾವಳೆ, ಕೊರೊನಾ ಆರಂಭದಲ್ಲಿ ನಾನು ‘ಗೋ ಕೊರೊನಾ ಗೋ’ ಘೋಷವಾಕ್ಯ ನೀಡಿದ್ದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಈಗ ನಾನು ‘ನೋ ಕೊರೊನಾ.. ಕೊರೊನಾ ನೋ’ ಎಂಬ ಘೋಷವಾಕ್ಯ ನೀಡುತ್ತಿದ್ದೇನೆ. ಇದು ಹೊಸ ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಇರುವ ಭಯ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ಕೆಲ ವಾರಗಳ ಹಿಂದೆ ಸ್ವತಃ ರಾಮ್‌ದಾಸ್ ಅಠಾವಳೆ ಅವರಿಗೂ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
PublicNext
28/12/2020 11:50 am