ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಟಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಮಿಲನ್ ಗೆ ಖತಾರ್ ಏರ್ ಲೈನ್ಸ್ ಮೂಲಕ ತೆರಳಿದ್ದಾರೆ ಎಂದು ವರದಿಯಾಗಿದ್ದು ಯಾರೂ ದೃಢಪಡಿಸಿಲ್ಲ.
ಸಂಸದರೊಂದಿಗೆ ರಾಹುಲ್ ಗಾಂಧಿ ಕಳೆದ ವಾರ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು. ಕೇಂದ್ರದ ಕೃಷಿ ಕಾಯಿದೆ ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಿದ್ದರು.ರಾಹುಲ್ ಗಾಂಧಿಗೆ ಮೋದಿ ಕೊಟ್ಟಿದ್ದು ಎಂಥಾ ಠಕ್ಕರ್ ರಾಹುಲ್ ಮತ್ತು ಸೋನಿಯಾ ಗೋವಾಕ್ಕೆ ಭೇಟಿ ಕೊಟಿದ್ದೇ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಒಂದು ಕಡೆ ರೈತರ ಪ್ರತಿಭಟನೆ ನಡೆಯುತ್ತಿದ್ದು ಕಾಂಗ್ರೆಸ್ ದೊಡ್ಡ ದನಿ ಎತ್ತುತ್ತಿದೆ. ಆದರೆ ಇದೆಲ್ಲವೂ ಮೇಲು ನೋಟಕ್ಕೆ ಮಾತ್ರ ಎನ್ನುವ ಕಮೆಂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದಿವೆ. ಕೃಷಿ ಕಾಯಿದೆ ವಿಚಾರದಲ್ಲಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.
PublicNext
27/12/2020 07:21 pm