ಮೈಸೂರು: ಸ್ವಗ್ರಾಮ ಸಿದ್ದರಾಮನಹುಂಡಿಗೆ ಭೇಟಿ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿನ ತಮ್ಮ ಸ್ನೇಹಿತನ ಮನೆಯಲ್ಲಿ ಊಟ ಮಾಡಿ ಕೆಲಕಾಲ ಉಭಯ ಕುಶಲೋಪರಿ ಹರಟೆಯಲ್ಲಿ ತೊಡಗಿದ್ದರು.
ಇದೇ ವೇಳೆ ಅಲ್ಲಿದ್ದ ಮಕ್ಕಳನ್ನು ಮಾತನಾಡಿಸಿದ ಸಿದ್ದರಾಮಯ್ಯ ಎಷ್ಟನೇ ಕ್ಲಾಸು? ಯಾವ ಮೀಡಿಯಮ್ಮು? ಎಂದೆಲ್ಲ ಕೇಳಿದ್ದಾರೆ. ಬಾಲಕ ಇಂಗ್ಲೀಷ್ ಮೀಡಿಯಮ್ ಎಂದು ತಿಳಿದ ಸಿದ್ದರಾಮಯ್ಯ, ಇಂಗ್ಲೀಷ್ ಮೀಡಿಯಮ್ ನಲ್ಲಿ ಓದಿದವರೆಲ್ಲ ಬುದ್ಧಿವಂತರಾಗಿಲ್ಲ. ನಾನು ಕೂಡ ಕನ್ನಡ ಮಾಧ್ಯಮದಲ್ಲೇ ಓದಿದ್ದು. ನಾನೇನು ಬುದ್ಧಿವಂತ ಅಲ್ವಾ? ಕನ್ನಡ ಮಾಧ್ಯಮದಲ್ಲಿ ಓದಿದವರು ಸಹ ದೊಡ್ಡ ವ್ಯಕ್ತಿ ಆಗ್ತಾರೆ ಎಂದು ಬಾಲಕನಿಗೆ ಹಿತವಚನ ಹೇಳಿದರು.
PublicNext
27/12/2020 06:46 pm