ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ ಅವರು ಫೇಸ್‌ಬುಕ್ ಲೈವ್ ವೇಳೆ ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ. ಇದರ ವಿಡಿಯೊ ಈಗ ವೈರಲ್ ಆಗುತ್ತಿದೆ.
ಸಾರ್ವಜನಿಕ ಆರೋಗ್ಯ ಕುರಿತಂತೆ ಅವರು ಲೈವ್ ಸ್ಟ್ರೀಮ್ ನಡೆಸುವ ವೇಳೆ ಪುತ್ರಿ ನೆವ್ ಮಿಡ್ ಡೇ ಕಡೆಯಿಂದ ಅಡ್ಡಿಯಾಗಿದೆ. ಜೆಸಿಂಡಾ ಅವರನ್ನು ಮೂರು ವರ್ಷದ ಪುತ್ರಿ ಲೈವ್ ವೇಳೆ ಮಮ್ಮಿ ಎಂದು ಕೂಗಿದ್ದಾಳೆ. ಈ ವೇಳೆ ಕೊಂಚ ಮುಜುಗರಕ್ಕೆ ಒಳಗಾದ ಜಸಿಂಡಾ ಅಡಚಣೆ ಉಂಟಾಗಿದ್ದಕ್ಕೆ ವಿಷಾದಿಸಿ ಮತ್ತೆ ಮಾತು ಮುಂದುವರೆಸಿದ್ದಾರೆ.
PublicNext
12/11/2021 08:29 pm