ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಭೋಮಂಡಲಕ್ಕೆ ಹಾರಲಿದೆ ಭಗವದ್ಗೀತೆ ಪ್ರತಿ, ಪ್ರಧಾನಿ ಮೋದಿ ಫೋಟೋ..!

ಶ್ರೀಹರಿಕೋಟ: ಭಗವದ್ಗೀತೆಯ ಪ್ರತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹೊತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋದ) ನ್ಯಾನೋ ಉಪಗ್ರಹ ನಭೋಮಂಡಲಕ್ಕೆ ಹಾರಲು ಸಜ್ಜಾಗಿದೆ.

ಹೌದು. ಫೆಬ್ರವರಿ 28ರಂದು ಉಡಾವಣೆಯಾಗಲಿರುವ ಉಪಗ್ರಹಕ್ಕೆ ದೇಶದ ಬಾಹ್ಯಾಕಾಶ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಸತೀಶ್ ಧವನ್ ಹೆಸರನ್ನು ಇಡಲಾಗಿದೆ. ಈ ಉಪಗ್ರಹದಲ್ಲಿ ಹಲವು ವಿಶೇಷತೆಗಳಿವೆ. ಭಗವದ್ಗೀತೆಯ ಪ್ರತಿ, ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಗೂ 25,000 ಸಾಧಕರ ಹೆಸರನ್ನು ಈ ನ್ಯಾನೋ ಸ್ಯಾಟಲೈಟ್ ಹೊತ್ತೊಯ್ಯಲಿದೆ ಎಂದು ಸ್ಪೇಸ್‌ಕಿಡ್ಜ್ ಇಂಡಿಯಾದ ಸ್ಥಾಪಕ, ಸಿಇಒ ಡಾ.ಶ್ರೀಮತಿ ಕೇಸನ್ ತಿಳಿಸಿದ್ದಾರೆ.

ನ್ಯಾನೊ ಸ್ಯಾಟಲೈಟ್ ಅನ್ನು ಸ್ಪೇಸ್‌ಕಿಡ್ಜ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಮೀಸಲಾಗಿರುತ್ತದೆ.

Edited By : Vijay Kumar
PublicNext

PublicNext

15/02/2021 10:54 pm

Cinque Terre

86.71 K

Cinque Terre

1

ಸಂಬಂಧಿತ ಸುದ್ದಿ