ಬೆಂಗಳೂರು: ಸೆಪ್ಟೆಂಬರ್ 13 ರಿಂದ ಕರ್ನಾಟಕ ವಿಧಾನಸಭೆಯ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದ ಕಾರ್ಯಕಲಾಪಗಳನ್ನು ಲೋಕಸಭೆಯ ಮಾದರಿಯಲ್ಲಿ ಚಿತ್ರೀಕರಿಸಿ ನೇರ ಪ್ರಸಾರ ಮಾಡಲು ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು ಇತರೆ ಖಾಸಗಿ ಚಾನೆಲ್ ಗಳಿಗೆ ಸ್ಯಾಟಲೈಟ್ ಮೂಲಕ ಸಂಪರ್ಕವನ್ನು ಒದಗಿಸುವ ಕಾರ್ಯವನ್ನು ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಹಾಗೂ ಅದೇ ರೀತಿ ಸದನದ ಕಾರ್ಯಕಲಾಪಗಳ ಛಾಯಾಚಿತ್ರಗಳನ್ನು ತೆಗೆದು ಮುದ್ರಣ ಮಾಧ್ಯಮದವರಿಗೆ ಒದಗಿಸುವ ಕಾರ್ಯವನ್ನು ವಾರ್ತಾ ಇಲಾಖೆಯವರಿಗೆ ವಹಿಸಲಾಗಿದೆ.
ಬೆಂಗಳೂರು ದೂರದರ್ಶನ ಕೇಂದ್ರದವರು ಚಿತ್ರೀಕರಿಸಿದ ವಿಧಾನಸಭೆಯ ಕಾರ್ಯಕಲಾಪಗಳ ದೃಶ್ಯಾವಳಿಯ ಔಟ್‌ಪುಟ್ ಅನ್ನು ಖಾಸಗಿ ಸುದ್ದಿ ವಾಹಿನಿಯವರು ವಾರ್ತಾ ಇಲಾಖೆ ಕೊಡಮಾಡುವ ಲಿಂಕ್ ಅಡಿಯಲ್ಲಿ ಪಡೆಯಬಹುದಾಗಿದೆ.
PublicNext
09/09/2021 09:10 pm