ಚೆನ್ನೈ: ಕಾಂಗ್ರೆಸ್ ಭಾರತ ಏಕತಾ ಯಾತ್ರೆಯಿಂದ ಮತ್ತೆ ರಾಹುಲ್ ಗಾಂಧಿ, ಬಿಜೆಪಿಯ ಟ್ರೋಲ್‌ಗೆ ಗುರಿಯಾಗಿದ್ದಾರೆ. ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಪಾದ್ರಿಯೊಬ್ಬರ ಜತೆಗಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ, ವಿವಾದಾತ್ಮಕ ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ರಾಹುಲ್ ಗಾಂಧಿಯವರ ಮುಂದೆ ಯೇಸು ಕ್ರಿಸ್ತನನ್ನು ನಿಜವಾದ ದೇವರು ಎಂದು ಹೇಳುತ್ತಿದ್ದಾರೆ ಮತ್ತು ಹಿಂದೂ ದೇವರು ಮತ್ತು ದೇವತೆಗಳನ್ನು ನಿಜವಾದ ದೇವರು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ರಾಹುಲ್ ಗಾಂಧಿ ಪಾದ್ರಿ ಬಳಿ ಯೇಸು ಕ್ರಿಸ್ತನು ದೇವರ ರೂಪವೇ? ಅದು ನಿಜವೆ? ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ಈ ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ವಿವರಿಸಿದ್ದು, ಜೀಸಸ್ ಕ್ರೈಸ್ಟ್ ನಿಜವಾದ ದೇವರು, ಶಕ್ತಿ ದೇವಿ ಅಥವಾ ದೇವತೆಗಳು ದೇವರಲ್ಲ ಎಂದು ಹೇಳಿದ್ದಾರೆ.
ಹೀಗೆ ವಿವಾದಾತ್ಮ ಹೇಳಿಕೆಗೆ ಗುರಿಯಾಗಿದ್ದು,ರಾಹುಲ್ ಗಾಂಧಿಯ ದ್ವೇಷದ ಜೋಡಿ ಅಭಿಯಾನ. ಜಾರ್ಜ್ ಪೊನ್ನಯ್ಯ ಅವರಂತಹ ವ್ಯಕ್ತಿಯನ್ನು ‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರ್ನಲ್ಲಿ ಹಾಕಲಾಗಿದೆ. ಹಿಂದೂಗಳಿಗೆ ಸವಾಲೆಸೆಯುವ, ಬೆದರಿಕೆ ಹಾಕುವ ಹಾಗೂ ಅನುಚಿತವಾಗಿ ಮಾತನಾಡುವ ಪಾದ್ರಿಗೆ ಮಹತ್ವ ಕೊಟ್ಟಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ.
PublicNext
10/09/2022 08:05 pm