ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: "ಉತ್ತರ ಕರ್ನಾಟಕ ವಿಷಯವಾಗಿ ಇಂದೂ ಗಟ್ಟಿ ಇದ್ದೇನೆ, ಎಂದೆಂದಿಗೂ ಗಟ್ಟಿ ಇರುತ್ತೇನೆ"

ಗದಗ: ಉಮೇಶ್ ಕತ್ತಿ ಅವರ ಮಾಧ್ಯಮ ಗೋಷ್ಠಿ ಅಂದ್ರೆ ಅಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ವಿಚಾರವಾಗಿ ಪ್ರಶ್ನೆಗಳು ಇದ್ದೇ ಇರುತ್ವೆ. ಆಗಸ್ಟ್ 26ರಂದು ಗದಗ ಜಿಲ್ಲೆಗೆ ಆಗಮಿಸಿದ್ದ ಸಚಿವ ಉಮೇಶ್ ಕತ್ತಿಯವರಿಗೂ ನಿರೀಕ್ಷೆಯಂತೆ ಉತ್ತರ ಕರ್ನಾಟಕ ವಿಷಯವಾಗಿ ಸೈಲೆಂಟ್ ಆಗಿದ್ದೀರಿ ಅನ್ನೋ ಪ್ರಶ್ನೆ ಎದುರಾಗಿತ್ತು... ಪ್ರತಿನಿಧಿ ಪ್ರಶ್ನೆಗೆ ತನ್ನದೇ ಸ್ಟೈಲ್ ನಲ್ಲಿ ಉಮೇಶ್ ಕತ್ತಿ ಉತ್ತರಿಸಿದ್ರು.

ಉತ್ತರ ಕರ್ನಾಟಕ್ಕೆ ಅನ್ಯಾಯ ಆಗೋದಕ್ಕೆ ಬಿಡಲ್ಲ ಅನ್ನೋ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿಗೆ ಇರುವ ಬದ್ಧತೆಯನ್ನ ತೋರಿಸಿದ್ರು. ಉತ್ತರ ಕರ್ನಾಟಕ ವಿಷಯವಾಗಿ ಉಮೇಶ್ ಕತ್ತಿ ಆಡಿದ ಕೊನೆಯ ಮಾತು ಅದಾಗಿತ್ತು. ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೂಹ ಮಾಡಿದ್ರೆ ರಾಜೀನಾಮೆಗೆ ರೆಡಿ. ಸಚಿವನಾಗಿದ್ರೆ ಏನಂತೆ, ಈಗ್ಲೇ ರಾಜೀನಾಮೆ ಕೊಡೊದಕ್ಕೂ ಸಿದ್ಧ ಅಂತಾ ಖಡಕ್ ಉತ್ತರ ನೀಡಿದ್ರು.

ಇತ್ತೀಚೆಗೆ ಸಾಫ್ಟ್ ಆಗಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ಉಮೇಶ್ ಕತ್ತಿ, ಉತ್ತರ ಕರ್ನಾಟಕ ವಿಷಯವಾಗಿ ಇಂದೂ ಗಟ್ಟಿ ಇದ್ದೇನೆ... ಎಂದೆಂದಿಗೂ ಗಟ್ಟಿ ಇರುತ್ತೇನೆ. ಅಭಿವೃದ್ಧಿ ನಿಂತ್ರೆ ಹೋರಾಟ ಇದ್ದೇ ಇರುತ್ತೆ. ಅಭಿವೃದ್ಧಿ ನಡೆದ್ರೆ ತೊಂದ್ರೆ ಇಲ್ಲ. ಉತ್ತರ ಕರ್ನಾಟಕದ ಸಿಎಂ ಅನ್ನೋದನ್ನ ಬಿಡಿ. ನಾನು ಕರ್ನಾಟಕದ ಹಿರಿಯ ರಾಜಕಾರಣಿ, ನಮ್ಮವರೇ ಸಿಎಂ ಇದ್ದಾಗ ಸಿಎಂ ಆಸೆ ಪಡೋದಿಲ್ಲ. ಸಿಎಂ ಅವಕಾಶ ಬಂದ್ರೆ ನಸೀಬು. ಬೆನ್ನು ಹತ್ತಿ ಹೋಗಲ್ಲ ಅಂತಾ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಆಸೆಯನ್ನ ವ್ಯಕ್ತ ಪಡಿಸಿದ್ರು. ಉತ್ತರ ಕರ್ನಾಟಕ ಮುಖ್ಯಮಂತ್ರಿ ಆಗಲ್ಲ. ಅಖಂಡ ಕರ್ನಾಟಕದ ಸಿಎಂ ಆಗುವ ಯೋಗ್ಯತೆ ನನಗಿದೆ ಅಂತಾ ಗಟ್ಟಿ ಧ್ವನಿಯಲ್ಲಿ ಹೇಳಿದ್ರು.

Edited By :
PublicNext

PublicNext

08/09/2022 10:39 pm

Cinque Terre

133.8 K

Cinque Terre

4

ಸಂಬಂಧಿತ ಸುದ್ದಿ