ಮೈಸೂರು: ಹಿಜಾಬ್ ಧರಿಸಿ ಮಕ್ಕಳನ್ನು ಹೆರುವ ಯಂತ್ರವಾಗಬೇಡಿ. ಹಿಜಾಬ್ ಬದಲಾಗಿ ಕಿತಾಬ್ ಹಿಡಿಯಿರಿ. ಆಗ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಹಿಜಾಬ್ ಹಿಜಾಬ್ ಅಂತ ಕಿತಾಬ್ ಮರೆತು ಮಕ್ಕಳನ್ನು ಹೆರುವ ಯಂತ್ರವಾಗಬೇಡಿ. ನೀವು ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು. ವಿದ್ಯೆ ಕಲಿತು, ಸ್ವತಂತ್ರರಾಗಿ ದುಡಿಯಬೇಕು ಎಂಬುದು ನಮ್ಮ ಉದ್ದೇಶ. ನೀವೆಲ್ಲಾ ಶಾಲೆಗೆ ಬಂದು ಸೌಹಾರ್ದಯುತವಾಗಿ ಕಲಿಯಿರಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.
ಡಿಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ನಂತರವಾದರೂ ಪಿಎಫ್‌ಐ, ಕೆಎಫ್‌ಡಿ ಬ್ಯಾನ್ ಮಾಡಬಹುದು ಎಂಬುದು ನಿರೀಕ್ಷೆ ಇತ್ತು. ಆದರೆ ಸರ್ಕಾರ ಇನ್ನೂ ಮಾಡಿಲ್ಲ. ಆದಷ್ಟು ಶೀಘ್ರದಲ್ಲಿ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಪ್ರತಾಪ್ ಸಿಂಹ ಇದೇ ವೇಳೆ ಹೇಳಿದ್ದಾರೆ.
PublicNext
13/02/2022 10:57 pm