ತುಮಕೂರು: ಮತಾಂತರ ಕಾಯ್ದೆಯ ವಿಚಾರ ಮುಂದಿನ ವಾರ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಇಡುತ್ತೇವೆ.ಆದರೆ ಈ ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವ ರೀತಿಯಲ್ಲಿ ರೂಪಿಸುತ್ತೇವೆ ಅಂತಲೇ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಬಲವಂತವಾಗಿಯೇ ಮತಾಂತರ ಮಾಡುವುದು ತಪ್ಪು.ಅದಕ್ಕೆ ಶಿಕ್ಷೆ ಕೂಡ ಇದೆ. ಆದರೆ, ಸ್ವಯಂ ಪ್ರೇರಣೆಯಿಂದ ಮತಾಂತರ ಹೊದುವವರಿಗಾಗಿಯೇ ಹೊಸ ಕಾಯ್ದೆಯನ್ನ ತರುವ ಯೋಚನೆ ಇದೆ. ಅದರ ರೂಪುರೇಷೆಗಳನ್ನ ಕೂಡ ತಯಾರಿಸಲಾಗುತ್ತಿದೆ.
ಸ್ವಯಂ ಪ್ರೇರಣೆಯಿಂದ ಮತಾಂತರ ಹೋದುವವರು ಮದುವೆ ರೀತಿಯಲ್ಲಿಯೇ ರಿಜಿಸ್ಟರ್ ಮಾಡಬೇಕಾಗುತ್ತದೆ.ಒಮ್ಮೆ ಮತಾಂತರ ಹೊಂದಿದರೇ ಅವರು ಮೂಲ ಜಾತಿ-ಧರ್ಮವನ್ನ ಕಳೆದುಕೊಳ್ಳುತ್ತಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ನೋಟೀಸ್ ಬೋರ್ಡ್ ನಲ್ಲೂ ಮತಾಂತರ ಹೊಂದಿದ ವ್ಯಕ್ತಿಯ ಹೆಸರನ್ನ ಹಾಕಲಾಗುತ್ತದೆ. ಯಾವುದೇ ಆಕ್ಷೇಪ ಇಲ್ಲದೇ ಇದ್ದರೇ,ಅಂತಹ ವ್ಯಕ್ತಿ ಮತಾಂತರವನ್ನ ಪುರಸ್ಕರಿಸಲಾಗುವುದು.ಪರಿಶಿಷ್ಟ ಜಾತಿಯ ವ್ಯಕ್ತಿ ಕ್ರಿಶ್ಚಿಯನ್ ಗೆ ಮತಾಂತರಗೊಂಡರೆ ಆತ ಅಲ್ಪ ಸಂಖ್ಯಾತ ಎಂದಾಗುತ್ತದೆ.ಪರಿಶಿಷ್ಟ ಪಂಗಡದವರು ಮತಾಂತರ ಗೊಂಡರೇ ಅವರು ಮೂಲ ಜಾತಿಯ ಪ್ರಮಾಣ ಪತ್ರದಲ್ಲೇ ಮುಂದುವರೆಯುತ್ತಾರೆ ಎಂದು ವಿವರಿಸಿದ್ದಾರೆ ಮಾಧುಸ್ವಾಮಿ.
PublicNext
12/12/2021 06:56 pm