ಚೆನ್ನೈ: ಶ್ರೀಲಂಕಾ ಹಾಗೂ ಭಾರತ ಗಡಿ ನಡುವಿನ ರಾಮಸೇತು ಸ್ಥಳವನ್ನು ಯಾಕೆ ಇನ್ನೂ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿಲ್ಲ? ಎಂದು ರಾಜ್ಯ ಸಭಾ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ರಾಮ್ ಸೇತು ಭಾಗದ ಮೇಲಿನ ವಿಮಾನ ಪ್ರಯಾಣದ ವೇಳೆ ಅದರ ಫೋಟೋಗಳನ್ನು ಟಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು ಈ ಪ್ರಶ್ನೆಯನ್ನು ಪ್ರಧಾನಿ ಮೋದಿಗೆ ಕೇಳಿದ್ದಾರೆ.
ರಾಮಸೇತು ಒಂದು ಪಾರಂಪರಿಕ ತಾಣ ಎಂದಿರುವ ಅವರು ಇದನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಪಟ್ಟಿಗೆ ಸೇರಿಸಲು ಮೋದಿ ಅವರಿಗೆ ಯಾವುದು ಅಡ್ಡ ಬಂದಿದೆ ಎಂದು ಪ್ರಶ್ನೆ ಮಾಡಿದ್ದಾರೆ.
PublicNext
12/10/2021 12:47 pm