ಧಾರವಾಡ: ಚಿಕ್ಕಮಂಗಳೂರು ದತ್ತ ಪೀಠ ದತ್ತಾತ್ರೇಯರು ತಪಸ್ಸು ಮಾಡಿದ್ದ ಪುಣ್ಯ ಸ್ಥಳವಾಗಿದೆ. ಪೌರಾಣಿಕ ಮತ್ತು ಐತಿಹಾಸಿಕ ದಾಖಲೆ ಇರುವಂತಹ ಸ್ಥಳ ಇದಾಗಿದ್ದು, ಈ ಹಿಂದೆ ಅನ್ಯ ಕೋಮಿನವರು ಹಿಂದೂಗಳ ಪವಿತ್ರ ಸ್ಥಳಗಳನ್ನು ಅತಿಕ್ರಮನ ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಲೇ ಬಂದಿದೆ. ದತ್ತ ಪೀಠ ವಿಚಾರದಲ್ಲಿ ಕಾಂಗ್ರೆಸ್ ತಾನೇ ಮಾಡಿಕೊಂಡಿದ್ದ ತಪ್ಪಿನಿಂದಾಗಿ ಇಂದು ಮೂಲೇ ಸೇರಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ ಕಾಂಗ್ರೆಸ್ ವಿರುಧ್ಧ ಕಿಡಿಕಾರಿದರು.
ಧಾರವಾಡದಲ್ಲಿ ಮಾತನಾಡಿರುವ ಅವರು, ಅನ್ಯ ಧರ್ಮೀಯರು ಹಿಂದೂಗಳ ಪವಿತ್ರ ಸ್ಥಳಗಳಾದ ಕಾಶಿ ವಿಶ್ವನಾಥ್, ಮಥುರಾ ಸೇರಿದಂತೆ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣ ಮಾಡುತ್ತಲೇ ಬಂದಿದ್ದಾರೆ.
ಬಿಜೆಪಿ ಸರ್ಕಾರ ಬರೋದಕ್ಕೆ ದತ್ತ ಪೀಠವೇ ಕಾರಣ. ಇನ್ನು ತಡಮಾಡದೇ ರಾಜ್ಯ ಸರ್ಕಾರ ಚಿಕ್ಕಮಂಗಳೂರು ದತ್ತ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಿ, ಹಿಂದೂ ಪೀಠವಾಗಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇವತ್ತು ಕಾಂಗ್ರೆಸ್ ಮೂಲೆಗುಂಪು ಆಗೋದಕ್ಕೆ ಅವರ ಧಾರ್ಮಿಯ ನೀತಿಯೇ ಕಾರಣ. ಆವತ್ತು ಕಾಂಗ್ರೆಸ್ ಅನ್ಯ ಧರ್ಮೀಯರ ಪರವಾಗಿ ಇತ್ತು. ದತ್ತ ಪೀಠ ತೀರ್ಪು ನೀಡಿದ್ದು ಸ್ವಾಗತಾರ್ಹ. ಕಾಂಗ್ರೆಸ್ ಯಾವಾಗಲೂ ಅನ್ಯ ಧರ್ಮೀಯರ ಪರವಾಗಿ ಕೆಲಸ ಮಾಡುತ್ತ ಬಂದಿದೆ ಎಂದು ಕಿಡಿ ಕಾರಿದ್ದಾರೆ.
PublicNext
29/09/2021 04:27 pm