ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಖ್ಯಮಂತ್ರಿ ಮೇಲೆ ವಿಶ್ವಾಸ ಇದೇ ನಮ್ಮ ಬೇಡಿಕೆ ಈಡೇರುತ್ತೆ! ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರು ಸಾರಿ ಎಮ್ ಎಲ್ ಎ ಆಗಲು ಪಂಚಮಸಾಲಿ ಸಮಾಜದ ಆರ್ಶೀವಾದ ಇದೆ. ಹಾಗಾಗಿ ನಮ್ಮ ಸಮಾಜವನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಪಂಚಮಸಾಲಿ ಪಾದಯಾತ್ರೆಯ ಪ್ರವರ್ತಕ ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿಗಳ ಮಕ್ಕಳ ಮುಂದಿನ ಪೀಳಿಗೆಗೊಸ್ಕರ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಐತಿಹಾಸಿಕ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ. ಅದಾದನಂತರ ಪ್ರಪಂಚಕ್ಕೆ ಪಂಚಮಸಾಲಿಗಳ ಒಗ್ಗಟ್ಟಿನ ಬಲಪ್ರದರ್ಶನ ತೋರಿಸಲಾಗಿದೆ. ಆಗ ಸಿಎಂ ಸೆ.15 ರೊಳಗೆ ಮೀಸಲಾತಿ ಕೊಡುತ್ತಿರಿ ಎಂದು ಅಧಿವೇಶನದಲ್ಲಿ ಮಾತು ಕೊಟ್ಟಿದ್ದರು. ಹಾಗಾಗಿ ಸಮಾಜದ ಜನರನ್ನು ಎಚ್ಚರಿಸಲು ಮಲೈ ಮಾದೇಶ್ವರ ಬೆಟ್ಟದಿಂದ ಕರ್ನಾಟಕದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ರಾಜ್ಯಮಟ್ಟದ ಬೃಹತ್ ಅಭಿಯಾನ ಏರ್ಪಡಿಸಲಾಗಿದ್ದು, ಇವತ್ತು 31 ನೇ ದಿನಕ್ಕೆ ಅಭಿಯಾನ ಹಮ್ಮಿಕೊಂಡಿದ್ದು, ಹು-ಧಾ ಮಹಾನಗರದ ಜಿಲ್ಲಾಮಟ್ಟದ ಪಂಚಮಸಾಲಿ ಪ್ರತಿಜ್ಞಾವಿಧಿ ನಡೆಯುತ್ತಿದ್ದು, ಅಭಿಯಾನದಲ್ಲಿ ಅನೇಕ ಚರ್ಚೆ ಮಾಡಿ ಮೀಸಲಾತಿ ಪಡೆಯಲು ಮುಂದಿನ ರೂಪುರೇಷೆ ಸಿದ್ದಗೊಳಿಸಲಾಗುವುದ ಎಂದರು.

ಸಮಾಜದ ಮುಖಂಡ ಶಾಸಕ ಬಸನಗೌಡ ಯತ್ನಾಳ ಅವರು ಅಧಿವೇಶನದಲ್ಲಿ ಧ್ವತಿ ಎತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ. ಅದರಂತೆ ಯತ್ನಾಳ ಅವರು ಬೆಳಗಾವಿಗೆ ಬಂದು ಈ ಬಗ್ಗೆ ಸಮೂದಾಯದ ಜನರಿಗೆ ತಿಳಿಸಿದ್ದಾರೆ. ಬರುವ ಅಕ್ಟೋಬರ್ 1 ರೊಳಗಾಗಿ ಸಮಾಜಕ್ಕೆ ಮೀಸಲಾತಿ ನೀಡಬೇಕು. ಇಲ್ಲವಾದರೇ ಯಾವುದೇ ಮನವಿ ಚರ್ಚೆಗೆ ಅವಕಾಶವಿಲ್ಲ‌. ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಾಗುವುದು ಎಂದು ಎಚ್ಚರಿಕೆ ನೀಡಿದರು.

Edited By : Manjunath H D
PublicNext

PublicNext

25/09/2021 12:39 pm

Cinque Terre

80.39 K

Cinque Terre

7

ಸಂಬಂಧಿತ ಸುದ್ದಿ