ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇವಲ ಹಿಂದೂ ಹಬ್ಬಗಳಿಂದಷ್ಟೇ ಕೊರೊನಾ ಬರುತ್ತಾ?: ಯತ್ನಾಳ್ ಪ್ರಶ್ನೆ

ವಿಜಯಪುರ: ಕೊರೊನಾದ ಹೆಸರಲ್ಲಿ ನಿಮ್ಮ ನಿರ್ಬಂಧನೆಗಳು ಕೇವಲ ಗಣೇಶ ಚತುರ್ಥಿಗೆ ಮೀಸಲಾಗಿವೆ. ಬೇರೆ ಹಬ್ಬಗಳಿಗೆ ಅದು ಅನ್ವಯ ಆಗೋದಿಲ್ಲವಾ? ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ನಮ್ಮ ವಿಜಯಪುರ ನಗರ ವ್ಯಾಕ್ಸಿನೇಷನ್ ನಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. 10 ಸಾವಿರ ಜನರನ್ನ ಸೇರಿಸಿ ಸಭೆ, ಸಮಾರಂಭಗಳು ನಡೆಯುತ್ತಿವೆ. ಅದರಿಂದ ಕೊರೊನಾ ಹರಡೋದಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಈ ವಿಷಯವನ್ನು ಸಿಎಂ ಗಮನಕ್ಕೂ ತಂದಿದ್ದೇನೆ. ನಾವು ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸುತ್ತೇವೆ. ವಿಜಯಪುರದ ಎಲ್ಲ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಯಾವುದಕ್ಕೂ ಆತಂಕಪಡದೇ ಹಬ್ಬ ಆಚರಿಸಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

22/08/2021 09:03 am

Cinque Terre

39.06 K

Cinque Terre

23

ಸಂಬಂಧಿತ ಸುದ್ದಿ