", "articleSection": "Politics,Religion,Viral", "image": { "@type": "ImageObject", "url": "https://prod.cdn.publicnext.com/s3fs-public/387839-1737703498-WhatsApp-Image-2025-01-24-at-12.53.29-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತಮ್ಮದೇ ಸಮುದಾಯದ ವಿರುದ್ಧ ಸುಪ್ರೀಂಕೋರ್ಟ್​ನ ಖ್ಯಾತ ವಕೀಲೆ, ಬಿಜೆಪಿ ಕಾರ್ಯಕರ್ತೆ ನಾಜಿಯಾ ಖಾನ್ ಗಂಭೀರವಾದ ಆರೋಪಗಳನ್ನು ಮಾಡುವ ಮೂಲಕ ಘಂಟಾಘೋಷ...Read more" } ", "keywords": "Love Jihad, Rape, Terrorism, Controversy, Nazia Statement, Women Safety, Crime Against Women, Jihadist Ideology, Radicalization, Religious Extremism.,,Politics,Religion,Viral", "url": "https://publicnext.com/article/nid/Politics/Religion/Viral" } ಅತ್ಯಾಚಾರ, 'ಲವ್ ಜಿಹಾದ್', ಭಯೋತ್ಪಾದನೆಯಂತಹ ಕೃತ್ಯಗಳಿಗೆ ಬೇಗನೆ ಆಶ್ರಯಿಸ್ತಾರೆ" - ವಿವಾದ ಎಬ್ಬಿಸಿದ ವಕೀಲೆ ನಾಜಿಯಾ ಹೇಳಿಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ಯಾಚಾರ, 'ಲವ್ ಜಿಹಾದ್', ಭಯೋತ್ಪಾದನೆಯಂತಹ ಕೃತ್ಯಗಳಿಗೆ ಬೇಗನೆ ಆಶ್ರಯಿಸ್ತಾರೆ" - ವಿವಾದ ಎಬ್ಬಿಸಿದ ವಕೀಲೆ ನಾಜಿಯಾ ಹೇಳಿಕೆ

ತಮ್ಮದೇ ಸಮುದಾಯದ ವಿರುದ್ಧ ಸುಪ್ರೀಂಕೋರ್ಟ್​ನ ಖ್ಯಾತ ವಕೀಲೆ, ಬಿಜೆಪಿ ಕಾರ್ಯಕರ್ತೆ ನಾಜಿಯಾ ಖಾನ್ ಗಂಭೀರವಾದ ಆರೋಪಗಳನ್ನು ಮಾಡುವ ಮೂಲಕ ಘಂಟಾಘೋಷವಾಗಿ ಮಾತನಾಡಿದ್ದಾರೆ.

ದೆಹಲಿಯ ರೋಹಿಣಿಯಲ್ಲಿ ನಡೆದ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆ 'ಚೇತನ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ಲಾಂ - ಮುಸ್ಲಿಮರ ವಿರುದ್ಧ ನಾಜಿಯಾ ಮಾತನಾಡಿದ್ದಾರೆ.

'ಶಾಂತಿಧೂತರು ಎಂದು ನಾವು ನಮ್ಮ ಸಮುದಾಯವನ್ನು ಹೇಳುತ್ತೇವೆ. ಆದ್ರೆ ಅವರು ಎಂದಿಗೂ ಶಾಂತಿಧೂತರಂತೆ ವರ್ತಿಸುತ್ತಿಲ್ಲ. ಮುಸ್ಲಿಮ್​ ಸಮುದಾಯದ ಒಳಹೊಕ್ಕು ನೋಡಿದರೆ ಗೊತ್ತಾಗಿದ್ದು, ಮಂಚದ ಮೇಲೆ ಸೊಸೆಯಂದಿರ ಜೊತೆ ಮಾವಂದಿರು, ಇಲ್ಲಿ ಸೊಸೆಯಂದಿರು ಸೆಕ್ಸ್​ ಟಾಯ್ಸ್​ಗಳಾಗಿದ್ದಾರೆ.

11 ಮಹಿಳೆಯರನ್ನೂ ಕರೆದುಕೊಂಡು ಹೋಗಿರುವುದನ್ನು ನಾನು ನೋಡಿದ್ದೇನೆ... ಸೊಸೆಯಂದಿರನ್ನು ಹಲಾಲ್​ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಒಂದು ಮುಸ್ಲಿಂ ಯುವತಿಯನ್ನು ನೋಡಿದ ಒಬ್ಬಾತ, ನನಗೆ ಆ ಹುಡುಗಿ ಇಷ್ಟವಾಗಿದ್ದಾಳೆ, ಐದು ಲಕ್ಷ ತೆಗೆದುಕೊಂಡು ನನಗೆ ನಿನ್ನ ಮಗಳನ್ನು ಕೊಡು ಎಂದು ಕರೆದುಕೊಂಡ ಹೋದ...ಅಂತ ಹೇಳಿದ್ದಾರೆ.

ಒಂದು ಲಕ್ಷ ರೂಪಾಯಿ ಕೊಟ್ಟು ಹುಡುಗಿಯರನ್ನು ಖರೀದಿಸ್ತಾರೆ. ಮದುವೆ ಎನ್ನುವುದು ಇಸ್ಲಾಂನಲ್ಲಿ ಗುತ್ತಿಗೆ ಅಷ್ಟೇ. ಒಂದಷ್ಟು ತಿಂಗಳು ಆದ ಮೇಲೆ ಅವರು ನಾಪತ್ತೆಯಾಗುತ್ತಾರೆ. ಆ ಹುಡುಗಿ ಅದರ ಬಗ್ಗೆ ಉಸಿರು ಎತ್ತುವಂತಿಲ್ಲ. ಏಕೆಂದರೆ ಆಕೆ ಸೆಕ್ಸ್​ ಟಾಯ್​ ಅಷ್ಟೇ ಎಂದಿದ್ದಾರೆ ನಾಜಿಯಾ. ಆದರೆ ಸನಾತನ ಧರ್ಮದಲ್ಲಿ ಮಹಿಳೆಯರನ್ನು, ಸೊಸೆಯಂದಿರನ್ನು ಪೂಜಿಸುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

1947ರಿಂದಲೂ ಇವರು ಪ್ರಾಫೆಟ್​ ಮೊಹಮ್ಮದ್​ ಅವರನ್ನು ಅನುಸರಿಸುತ್ತಿಲ್ಲ. ಆದರೆ ಔರಂಗಜೇಬ್​ನಂಥವರನ್ನು ಅನುಸರಿಸುತ್ತಿದ್ದಾರೆ. ಶಾಂತಿಪ್ರಿಯ ಸಮುದಾಯ ಎಂದು ಹೇಳಿಕೊಂಡು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಹಿಂದೂಗಳ ಮಂದಿರ ಬಳಿ ಹೋಗಬೇಡ, ಪ್ರಸಾದ ತಿನ್ನಬೇಡ, ಅವರ ಮನೆಯ ನೀರು ಕುಡಿಯಬೇಡ ಎಂದು ನಮಗೆ ಕಲಿಸುತ್ತಾರೆ. ಇವೆಲ್ಲಾ ಹರಾಮ್​ ಅಂತಾರೆ, ನೀವು ಹೀಗೆ ಮಾಡಿದರೆ ಅಲ್ಹಾನಿಗೆ ಕೋಪ ಬರುತ್ತದೆ ಅಂತಾರೆ. ಮದುವೆಗೆ ಹಿಂದೂಗಳನ್ನು ಆಯ್ಕೆ ಮಾಡಿಕೊಳ್ಳುವುದು ಹರಾಮ್​ ಎಂದು ಹೇಳಿಕೊಡ್ತಾರೆ. ಇದರ ಹಿಂದಿರುವ ರಹಸ್ಯ ಏನು ಎಂದು ಪ್ರಶ್ನಿಸಿರುವ ನಾಜಿಯಾ ಖಾನ್​, ಈ ರಹಸ್ಯವನ್ನು ತೆರೆದಿಡಬೇಕಿದೆ ಎಂದಿದ್ದಾರೆ.

ಇದೇ ರೀತಿಯಾಗಿ ನಾಜಿಯಾ ಅವರು, ತಮ್ಮ ಭಾಷಣದಲ್ಲಿ, ಮುಸ್ಲಿಮರು ಶಿಕ್ಷಣ ಮತ್ತು ಮಾನವೀಯತೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅತ್ಯಾಚಾರ, "ಲವ್ ಜಿಹಾದ್" ಮತ್ತು ಭಯೋತ್ಪಾದನೆಯಂತಹ ಕೃತ್ಯಗಳಿಗೆ ಬೇಗನೆ ಆಶ್ರಯಿಸುತ್ತಾರೆ ಎಂದು ಆರೋಪಿಸಿದ್ದಾರೆ.

Edited By : Abhishek Kamoji
PublicNext

PublicNext

24/01/2025 12:56 pm

Cinque Terre

40.34 K

Cinque Terre

15