ಲೋಕಸಭಾ ಅಧ್ಯಕ್ಷರು ಮತ್ತು ಎಲ್ಲಾ ರಾಜ್ಯಗಳ ವಿಧಾನ ಸಭೆ-ವಿಧಾನ ಪರಿಷತ್ತಿನ ಅಧ್ಯಕ್ಷರನ್ನು ಒಳಗೊಂಡ ಪೀಠಾಸೀನಾಧಿಕಾರಿಗಳ ಸಮ್ಮೇಳನದ ಅಧ್ಯಕ್ಷರಾದ ಓಂ ಪ್ರಕಾಶ್ ಬಿರ್ಲಾ ಅವರು, ಅತ್ಯುತ್ತಮ ವಿಧಾನಸಭೆ- ಪರಿಷತ್ ನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ..
ಕಳೆದ ವರ್ಷ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ 82 ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದ ಶತಮಾನೋತ್ಸವದ ಸಮಾರಂಭದಲ್ಲಿ ತೆಗೆದುಕೊಂಡ ನಿರ್ಣಯದಂತೆ, ಅತ್ಯುತ್ತಮ ವಿಧಾನ ಸಭೆ ಮತ್ತು ಅತ್ಯುತ್ತಮ ವಿಧಾನ ಪರಿಷತ್ತು ಪ್ರಶಸ್ತಿಗೆ ಮಾನದಂಡಗಳನ್ನು ರೂಪಿಸಲು ಅಖಿಲ ಭಾರತ ಪೀಠಾಸೀನಾಧಿಗಳ ಸಮಿತಿಯನ್ನು ರಚಿಸಿ ಅದಕ್ಕೆ ಅಧ್ಯಕ್ಷರನ್ನಾಗಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ನೇಮಕ ಮಾಡಿರುತ್ತಾರೆ.ಈ ಸಮಿತಿಯಲ್ಲಿ ದೆಹಲಿ ವಿಧಾನಸಭಾಧ್ಯಕ್ಷರು, ಮಹಾರಾಷ್ಟ್ರ ವಿಧಾನ ಪರಿಷತ್ ನಸಭಾಪತಿಗಳು,ಬಿಹಾರವಿಧಾನ ಸಭೆಯ ಅಧ್ಯಕ್ಷರು,ಅಸ್ಸಾಂ, ಗುಜರಾತ್, ತಮಿಳುನಾಡು ವಿಧಾನ ಸಭೆಯ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ..
PublicNext
31/05/2022 07:45 pm