ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಭಾರಿ ಮಳೆಗೆ ಹೈರಾಣಾದ ಜನತೆ; ನೆರವಿಗೆ ನಿಂತ ಮಾಜಿ ಸಿಎಂ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗ್ತಿದ್ದು, ಚನ್ನಪಟ್ಟಣಕ್ಕೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತೆರಳಿದ್ದಾರೆ. ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದ ಜನರು ಹೈರಾಣಾಗಿದ್ದು ಸುಮಾರು 150 ರಿಂದ 200 ಜನರು ಮನೆಯೊಂದರಲ್ಲೇ ಸಿಲುಕಿಕೊಂಡಿದ್ದಾರೆ. ಜನರ ರಕ್ಷಣೆಗೆ ತುರ್ತಾಗಿ 2 ದೋಣಿಗಳನ್ನು ಕಳಿಸುವಂತೆ ತಕ್ಷಣವೇ NDRF ತಂಡ ಕಳಿಸಲು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ & ಸಿಎಂನ ಪ್ರಧಾನ ಕಾರ್ಯದರ್ಶಿಗಳ ಜೊತೆ ಹೆಚ್‌ ಡಿ ಕೆ ಚರ್ಚೆ ನಡೆಸಿದ್ದಾರೆ. ಇನ್ನು ಕೆರೆಯಂತಾದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರಿಸ್ಥಿತಿಯ ನಡುವೆಯೂ ಚನ್ನಪಟ್ಟಣಕ್ಕೆ ಮಾಜಿ ಸಿಎಂ ಎಚ್‌ಡಿಕೆ ಧಾವಿಸಿದ್ದಾರೆ.

Edited By : Shivu K
PublicNext

PublicNext

29/08/2022 12:57 pm

Cinque Terre

30.23 K

Cinque Terre

0

ಸಂಬಂಧಿತ ಸುದ್ದಿ