ಮೈಸೂರು: ಸಾಹಿತಿ ಎಸ್.ಎಲ್.ಭೈರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಚಾಮುಂಡಿ ಬೆಟ್ಟವನ್ನ ಕಾಂಕ್ರೀಟ್ ಕಾಡಾಗಿ ಪರಿವರ್ತಿಸಲೇಬೇಡಿ ಅಂತಲೇ ಕೇಳಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಿಂದ ಬೆಟ್ಟಕ್ಕೆ ತೊಂದರೆ ಆಗುತ್ತಿದೆ. ಆದರಿಂದ ಈ ಯೋಜನೆಯನ್ನ ಕೈಬಿಡಬೇಕೆಂದು ಮನವಿ ಮಾಡಿದ್ದಾರೆ. ಬೆಟ್ಟದಲ್ಲಿ ಗ್ರ್ಯಾನೈಟ್ ಬಂಡೆಗಳಿವೆ. ಬೇಸಿಗೆಯಲ್ಲಿ ಈ ಬಂಡೆಗಳು ಹೆಚ್ಚು ಶಾಖವನ್ನ ಹೊರಡಿಸುತ್ತವೆ. ಆದ್ದರಿಂದ ಇಲ್ಲಿ ಗಿಡಗಳನ್ನ ನೆಟ್ಟರೆ ಅತಿ ಉತ್ತಮ ಎಂದು ಹೇಳಿದ್ದಾರೆ.
ಬೆಟ್ಟದಲ್ಲಿ ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿಗೆ ಮಾತ್ರ ಅವಕಾಶ ಮಾಡಿಕೊಡಬೇಕು. ಉಳಿದವರನ್ನ ನಗರಕ್ಕೆ ಸ್ಥಳಾಂತರಿಸಿ ಪರಿಹಾರ ಕೊಡಬೇಕೆಂದು ಭೈರಪ್ಪ ಪತ್ರದ ಮೂಲಕ ಮೋದಿ ಅವರಿಗೆ ಹೇಳಿದ್ದಾರೆ.
PublicNext
23/11/2021 03:16 pm