ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಲಾವೃತ ರಸ್ತೆಯಲ್ಲಿ ತೆಪ್ಪ ನಡೆಸಿದ ಬಿಜೆಪಿ ದೆಹಲಿ ವಕ್ತಾರ.!

ನವದೆಹಲಿ: ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಲವು ಕಡೆದ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಾಹನ ಚಾಲಕರು ಹಾಗೂ ಸವಾರರು ಪರದಾಡುವಂತಾಗಿದೆ.

ಈ ಮಧ್ಯೆ ಬಿಜೆಪಿಯ ದೆಹಲಿ ವಕ್ತಾರ ತಜಿಂದರ್ ಪಾಲ್ ಸಿಂಗ್ ರಾಷ್ಟ್ರ ರಾಜಧಾನಿಯ ಜಲಾವೃತ ರಸ್ತೆಯಲ್ಲಿ ತೆಪ್ಪ ನಡೆಸಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. "ನಾನು ಈ ಋತುವಿನಲ್ಲಿ ಋಷಿಕೇಶಕ್ಕೆ ರಾಫ್ಟಿಂಗ್‌ಗೆ ಹೋಗಲು ಬಯಸಿದ್ದೆ. ಆದರೆ ಕೋವಿಡ್-19 ಕಾರಣದಿಂದ ಸಾಧ್ಯವಾಗಲಿಲ್ಲ. ಆದರೆ ಸಿಎಂ ಅರವಿಂದ ಕೇಜ್ರಿವಾಲ್ ಅವರಿಂದಾಗಿ ನಾನು ದೆಹಲಿಯಲ್ಲಿಯೇ ಆ ಅನುಭವವನ್ನು ಪಡೆಯುತ್ತಿದ್ದೇನೆ" ಎಂದು ಕುಟುಕಿದ್ದಾರೆ.

Edited By : Vijay Kumar
PublicNext

PublicNext

11/09/2021 07:37 pm

Cinque Terre

71.76 K

Cinque Terre

3

ಸಂಬಂಧಿತ ಸುದ್ದಿ