ವರದಿ: ಪ್ರವೀಣ್ ರಾವ್
ಬೆಂಗಳೂರು: ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ ಬಿಜೆಪಿ ವರಿಷ್ಟ, ಕೇಂದ್ರ ಗೃಹಸಚಿವ ಅಮಿತ್ ಶಾ ತಮ್ಮ ಎದುರಿಗೆ ಬಂದ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನ ಯಕ್ಕಾಮಕ್ಕಾ ಉಗಿದು ಹಾಕಿದ್ದಾರೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಹೋಮ್ ಮಿನಿಸ್ಟರ್ ಅಂತ ಬರೀ ಫೋಜ್ ಕೊಡೋದಲ್ಲ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕ್ರೀ.. ಎಂದು ಗರಂ ಆಗಿದ್ದಾರೆ ಎಂಬ ಮಾಹಿತಿ ಇದೆ. ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ ಸಂಕಲ್ಪ ಸೇ ಸಿದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ನಿನ್ನೆ ಸಂಜೆ ಆಗಮಿಸಿದ ಅಮಿತ್ ಶಾ ಅವರು ಇವತ್ತು ನಡೆದ ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತು ರಾಜ್ಯ ಬಿಜೆಪಿ ಮಖಂಡರೊಡನೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅಮಿತ್ ಶಾ ಅವರಿಗೆ ಪ್ರಸಕ್ತ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು. ಇದಕ್ಕೂ ಮೊದಲು ಅಮಿತ್ ಶಾ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನವರು ಸರ್ಕಾರದ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ರು ಎನ್ನಲಾಗಿದೆ. ಎಲ್ಲದರಿಂದ ಪಿತ್ತ ನೆತ್ತಿಗೇರಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರಗ ಅವರು ಕಣ್ಣಿಗೆ ಬೀಳುತ್ತಿದ್ದಂತೆಯೇ ಕೆಂಡಾ ಮಂಡಲವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ತೊಡಗಿದ್ದವರನ್ನು ಬಂಧಿಸಲು ವಿಳಂಬವಾದ ಬಗ್ಗೆ ತೀವೃ ಅಸಮಾಧಾನ ವ್ಯಕ್ತಪಡಿಸಿದ ಶಾ, ಜ್ಞಾನೇಂದ್ರ ಅಂತ ಹೆಸರು ಇಟ್ಕಂಡಿದ್ದೀರಾ ಮೀಡಿಯಾದವರ ಎದುರು ಅಬ್ಬರಿಸ್ತೀರಾ ಹಾಗೇ ಕೆಲ್ಸನೂ ಮಾಡ್ಬೇಕಲ್ವಾ? ನಿಮ್ಮ ಕೈಯಲ್ಲಿ ಆಗ್ದೇ ಇದ್ರೆ ಹೇಳಿ ಬೇರೆ ವ್ಯವಸ್ಥೆ ಮಾಡೋಣ ಅಂತ ಗರಂ ಆದರೆಂದು ತಿಳಿದುಬಂದಿದೆ ಕೇಂದ್ರ ಗೃಹಸಚಿವರ ಪ್ರಹಾರದಿಂದ ಆರಗಜ್ಞಾನೇಂದ್ರ ಬೆಚ್ಚಿ ಬಿದ್ದರೆಂದು ತಿಳಿದುಬಂದಿದೆ.
PublicNext
04/08/2022 05:32 pm