ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆ.18 ರಂದು ದೇಶಾದ್ಯಂತ ರೈಲು ತಡೆಗೆ ಕರೆ

ನವದೆಹಲಿ: ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು, ತಮ್ಮ ಹೋರಾಟವನ್ನ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಫೆಬ್ರವರಿ 18ರಂದು ದೇಶಾದ್ಯಂತ ರೈಲು ತಡೆಗೆ ಕರೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಡಾ.ದರ್ಶನ್ ಪಾಲ್, ಫೆಬ್ರವರಿ 12ರಂದು ರಾಜಸ್ಥಾನದಲ್ಲಿರುವ ಎಲ್ಲಾ ಟೋಲ್​​ಗಳಿಗೆ ಮುತ್ತಿಗೆ ಹಾಕುವುದು ಹಾಗೂ ಟೋಲ್​ ಫೀ ಸಂಚಾರಕ್ಕೆ ಪ್ರಯತ್ನಿಸಲಾಗುವುದು. ಫೆ.14 ರಂದು ಕ್ಯಾಂಡಲ್ ಮಾರ್ಚ್, ಪುಲ್ವಾಮಾ ಅಟ್ಯಾಕ್​​ನಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಲಾಗುವುದು. ಫೆ.16 ಸರ್​ ಛೋಟುರಾಮ್ ದಿನಾಚರಣೆಯನ್ನ ದೇಶಾದ್ಯಂತ ಆಚರಿಸಿ ಒಗ್ಗಟ್ಟು ಪ್ರದರ್ಶನ ಮಾಡುವುದು. ಜೊತೆಗೆ ಫೆ. 18 ರಂದು ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೂ ದೇಶಾದ್ಯಂತ ರೈಲು ತಡೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

10/02/2021 08:59 pm

Cinque Terre

86.2 K

Cinque Terre

20

ಸಂಬಂಧಿತ ಸುದ್ದಿ