ಮಥುರಾ: ಜ್ಞಾನವ್ಯಾಪಿ ಮಸೀದಿ ವಿವಾದ ಇನ್ನೂ ಇದೆ. ಅದಿರೋವಾಗ್ಲೇ, ಮಥುರಾದ ಶ್ರೀ ಕೃಷ್ಣ ಜನ್ಮ ಭೂಮಿ ಮತ್ತು ಶಾಹಿ ಈದ್ಗಾ ಮಸೀದಿಯ ವಿವಾದ ಈಗ ಎದ್ದಿದೆ.
ಈ ಹಿನ್ನೆಲೆಯಲ್ಲಿಯೇ ಹಿಂದೂ ಮಹಾಸಭಾ ಶಾಹಿ ಈದ್ಗಾ ಮಸೀದಿಯ ಶುದ್ದೀಕರಣ ಕೋರಿ ಸಿವಿಲ್ ನ್ಯಾಯಾಲದಲ್ಲಿ ಮನವಿ ಸಲ್ಲಿಸಿದೆ.
ಈ ಅರ್ಜಿಯ ವಿಚಾರಣೆ ಮುಂದಿನ ತಿಂಗಳು ಜೂನ್-1 ರಂದು ನಡೆಯಲಿದೆ.ಶ್ರೀಕೃಷ್ಣ ಜನ್ಮ ಭೂಮಿ ಪಕ್ಕದಲ್ಲಿಯೇ ಶಾಹಿ ಈದ್ಗಾ ಮಸೀದಿ ಇದೆ.
ಶ್ರೀ ಕೃಷ್ಣ ಜನ್ಮ ಭೂಮಿಯ ಗರ್ಭಗುಡಿಯಲ್ಲಿಯೇ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಖಜಾಂಜಿ ದಿನೇಶ್ ಶರ್ಮಾ ಮನವಿಯಲ್ಲಿ ಹೇಳಿದ್ದಾರೆ.
PublicNext
23/05/2022 10:58 pm