ನವದೆಹಲಿ: ಪ್ರತಿ ಟಿಬೆಟಿಯನ್ ಕುಟುಂಬದಲ್ಲಿ ಒಬ್ಬರು ಚೀನಾ ಸೇನಾಪಡೆಯನ್ನು ಸೇರಿಕೊಳ್ಳಲಿದ್ದಾರೆ.
ಇತ್ತೀಚಿನ ಪೂರ್ವಲಡಾಖ್ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ, ಮುಂದಿನ ದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್ ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ತನ್ನ ವಶದಲ್ಲಿರುವ ಟಿಬೆಟ್‍ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಪೂರ್ವ ಲಡಾಖ್ ಸಂಘರ್ಷದ ವೇಳೆ ಭಾರತ ತನ್ನ ಸ್ಪೆಷಲ್ ಫ್ರಂಟಿಯರ್ಸ್ ಪಡೆಯನ್ನು ನಿಯೋಜಿಸಿತ್ತು. ವಲಸಿಗ ಟಿಬೆಟಿಯನ್ ಸಮುದಾಯದವರನ್ನೇ ಆಯ್ದು ರಚಿಸಿರುವ ಈ ಪಡೆ ಲಡಾಖ್‍ನ ಅತ್ಯಂತ ಸಂಕಷ್ಟಮಯ ವಾತಾವರಣವನ್ನೂ ಸುಲಭವಾಗಿ ಎದುರಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿಯೇ ಪೂರ್ವ ಲಡಾಖ್‍ನಲ್ಲಿ ಚೀನಾಯೋಧರು ಹಿನ್ನಡೆ ಅನುಭವಿಸಿದ್ದರು.
PublicNext
31/07/2021 02:48 pm