ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪ: ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು ಶಿಕ್ಷೆ,

ಬೆಂಗಳೂರು: ರಾಜಧಾನಿ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್‌ಗೆ ಭಾರಿ ಸಂಕಷ್ಟ ಎದುರಾಗಿದೆ. ಉದಯ್ ಗರುಡಾಚಾರ್ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಇಂದು ಶಿಕ್ಷೆ ಪ್ರಕಟಿಸಿದೆ. ಉದಯ್ ಗರುಡಾಚಾರ್​ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ನ್ಯಾಯಪೀಠ ಆದೇಶ ಹೊರಡಿಸಿದೆ. ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವ ಆರೋಪದ ಮೇಲೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕ್ರಿಮಿನಲ್ ಕೇಸ್‌ಗಳ ಬಗ್ಗೆ ಮಾಹಿತಿ ನೀಡದ ಶಾಸಕ ಉದಯ್ ಗರುಡಾಚಾರ್ 2018ರಲ್ಲಿ ಚಿಕ್ಕಪೇಟೆ ಚುನಾವಣೆಯ್ಲಿ ಸ್ಪರ್ಧಿಸಿದ್ದಾಗ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಕೇಸ್ ಗಳ ಮಾಹಿತಿ ಮುಚ್ಚಿಟ್ಟಿದ್ದರು. ಈ ಬಗ್ಗೆ ಪ್ರಕಾಶ್ ಎಂ ಶೆಟ್ಟಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಲವು ಮಾಹಿತಿ ಮುಚ್ಚಿಟ್ಟಿದ್ದ ಶಾಸಕ ಇನ್ನು ಆರ್‌ಒಸಿಯಿಂದ ಉದಯ್ ಗರುಡಾಚಾರ್ ಹಾಗೂ ಅವರ ಪತ್ನಿ ಅನರ್ಹಗೊಂಡಿದ್ದರು. ಈ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಮುಚ್ಚಿಟ್ಟಿದ್ದರು. ಮೆವರಿಕ್ ಹೋಲ್ಡಿಂಗ್ಸ್ ನಲ್ಲಿ ಎಂಡಿಯಾಗಿದ್ದರೂ ಹೂಡಿಕೆದಾರ ಎಂದು ನಮೂದು ಮಾಡಿದ್ದರು. ಅಲ್ಲದೇ ಅವರ ಪತ್ನಿ ನಿರ್ದೇಶಕರಾಗಿರುವುದನ್ನೂ ಸಹ ನಮೂದಿಸಿರಲಿಲ್ಲ.

ಇದರ ಜೊತೆಗೆ ತಮ್ಮ ಪತ್ನಿಯ ಬ್ಯಾಂಕ್ ವಿವರ ನೀಡದೇ ಮುಚ್ಚಿಟ್ಟ ಆರೋಪ ಇವರ ಮೇಲಿತ್ತು. ಈ ಎಲ್ಲದರ ಬಗ್ಗೆ ಹೆಚ್.ಜಿ.ಪ್ರಶಾಂತ್ ಅವರು ದೂರು ದಾಖಲಿಸಿದ್ದರು. ಇಂದು ತೀರ್ಪು ಪ್ರಕಟಿಸಿದ್ದ, ಕೋರ್ಟ್‌ ಈ ಬಗ್ಗೆ ವಿಚಾರಣೆ ನಡೆಸುತ್ತಿತ್ತು. ಈ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಎಸಿಎಂಎಂ ಕೋರ್ಟ್ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಉದಯ್ ಗರುಡಾಚಾರ್‌ಗೆ ಜಾಮೀನು ನೀಡಿದ ನ್ಯಾಯಪೀಠ ಇನ್ನು ಶಿಕ್ಷೆ ಪ್ರಕಟಿಸಿದ ಬಳಿಕ ಜಾಮೀನುಗಾಗಿ ಶಾಸಕ ಉದಯ್ ಗರುಡಾಚಾರ್ ಮನವಿ ಮಾಡಿದ್ರು. ಇದನ್ನು ಪರಿಶೀಲಿಸಿದ ಕೋರ್ಟ್, 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಿದೆ. 25,000 ರೂಪಾಯಿ ಬಾಂಡ್, ಶ್ಯೂರಿಟಿ ಒದಗಿಸಲು ನ್ಯಾಯಾಧೀಶ ಜೆ. ಪ್ರೀತ್​ ಷರತ್ತು ಸೂಚನೆ ನೀಡಿದ್ದಾರೆ.

Edited By : Abhishek Kamoji
PublicNext

PublicNext

13/10/2022 07:44 pm

Cinque Terre

65.21 K

Cinque Terre

2

ಸಂಬಂಧಿತ ಸುದ್ದಿ