ಡ್ರಗ್ಸ್ ಪ್ರಕರಣವೊಂದರಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅಂದರ್ ಆಗಿದ್ದಾರೆ. ಸದ್ಯ ಬಂಧನದಲ್ಲಿರುವ ಮಗನ ಬಗ್ಗೆ ತಂದೆಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ಕೇಂದ್ರದ ರಾಜ್ಯ ಸಚಿವ ರಾಮದಾಸ್ ಅಠಾವಳೆ ಕೇಂದ್ರ ಸಚಿವರು ಕಿವಿಮಾತು ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಆರ್ಯನ್ ಖಾನ್ ಗೆ ಭವಿಷ್ಯವಿದೆ. ಸಚಿವಾಲಯದ ಸಹಯೋಗದಲ್ಲಿರುವ ಡಿ-ಅಡಿಕ್ಷನ್ ಪುನರ್ವಸತಿ ಕೇಂದ್ರಕ್ಕೆ ಆರ್ಯನ್ ನನ್ನು ಸೇರಿಸುವಂತೆ ಸಲಹೆ ನೀಡಿದ್ದಾರೆ. ಆರ್ಯನ್ ಖಾನ್ ನನ್ನು ಜೈಲಿನಲ್ಲಿಡುವ ಬದಲು ಒಂದು ಅಥವಾ ಎರಡು ತಿಂಗಳು ಪುನರ್ವಸತಿ ಕೇಂದ್ರದಲ್ಲಿಡಲಿ. ದೇಶಾದ್ಯಂತ ಅಂತಹ ಹಲವು ಸೆಂಟರ್ ಗಳಿವೆ. ಅವನು ಡ್ರಗ್ಸ್ ಅಡಿಕ್ಷನ್ ನಿಂದ ಗುಣಮುಖನಾಗಿ ಹೊರಬರುತ್ತಾನೆ ಎಂದಿದ್ದಾರೆ.
ಆರೋಪಿಗಳನ್ನು ಜೈಲಿಗೆ ಕಳುಹಿಸದಂತೆ ಹೊಸ ಕಾನೂನು ರೂಪಿಸಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
PublicNext
25/10/2021 01:56 pm