ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ಫ್ಯೂ ಉಲ್ಲಂಘಿಸಿ ಕುಣಿದು ಕುಪ್ಪಳಿಸಿದ ಶಾಸಕ ಶರಣು ಸಲಗರ,ವೀಡಿಯೋ ವೈರಲ್

ಬೀದರ್: ಸರ್ಕಾರ ರೂಲ್ಸ್ , ಲಾಕ್ ಡೌನ್ ಅಂತೆಲ್ಲಾ ನಿಯಮ ತಂದು ದುಡಿದು ತಿನ್ನುವ ಕೈಗಳನ್ನು ಕಟ್ಟಿಹಾಕಿದ್ರೆ,ಇತ್ತ ಆಡಳಿತಾರೂಢ ಪಕ್ಷದ ಶಾಸಕರೇ ಈ ನಿಯಮಗಳೆಲ್ಲಾ ನಮಗಲ್ಲವೇ ಅಲ್ಲ ಅಧಿಕಾರಿಗಳು ಮಾಡಿದ್ದೇ ರೂಲ್ಸ್ ಅನ್ನೋರೀತಿ ನಡೆದುಕೊಳ್ಳುತ್ತಿದ್ದಾರೆ.

ಹೌದು ಕೋವಿಡ್ ನಿಯಮ ಉಲ್ಲಂಘಿಸಿ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ ಮಾಸ್ಕ್ ಸಾಮಾಜಿಕ ಅಂತರ ಎಲ್ಲಾ ಬಿಟ್ಟು ಮೈ ಮರೆತು ಸಕ್ಕತ್ ಡಾನ್ಸ್ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕರ್ಫ್ಯೂ ಜಾರಿಗೊಳಿಸಿದೆ ಅದರ ಬೆನ್ನಲ್ಲೇ ನಿಯಮಗಳನ್ನ ಗಾಳಿಗೆ ತೂರಿ ಬಸವಕಲ್ಯಾಣ ನಗರದಲ್ಲಿ ಡಾನ್ಸ್ ಕ್ರೇಜಿ ಅಕಾಡಮಿ ಉದ್ಘಾಟನೆ ಮಾಡಿ ಶಾಸಕರು ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ.

ಶಾಸಕ ಶರಣು ಸಲಗರ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,

ಶಾಸಕರ ವರ್ತನೆಗೆ ಕಲ್ಯಾಣ ನಾಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೆ ಒಂದು ನ್ಯಾಯಾನಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

Edited By : Shivu K
PublicNext

PublicNext

09/01/2022 12:49 pm

Cinque Terre

102.82 K

Cinque Terre

30

ಸಂಬಂಧಿತ ಸುದ್ದಿ