ಇರಾನ್: ಉಕ್ರೇನ್ ಮೇಲೆ ರಷ್ಯಾ ದಾಳಿ ಇನ್ನೂ ನಿಂತಿಲ್ಲ. ಜೀವ ಹಾನಿಗಳ ಲೆಕ್ಕವೂ ಇಲ್ಲ.ಇದರ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇರಾನ್ ಪ್ರವಾಸ ಕೈಗೊಂಡಿದ್ದಾರೆ.
ಯುದ್ಧ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿ ಪುಟಿನ್ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರ ಜೊತೆಗೆ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ನಡುವನ ಸಹಕಾರದ ಬಗ್ಗೆನೂ ಚರ್ಚೆ ನಡೆಸಿದರು.
ಉಕ್ರೇನ್ ಮೇಲಿನ ದಾಳಿಗೆ ಬೆಂಬಲಿಸುವಂತೆ ಇರಾನ್ ನಾಯಕ ಅಲಿ ಖಮೇನಿಗೆ ಪುಟಿನ್ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ಬಗ್ಗೆನೂ ಇಲ್ಲಿ ಪ್ರಸ್ತಾಪಿಸಲಾಗಿದೆ.
PublicNext
20/07/2022 03:48 pm