ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ತೀವ್ರ ಪೈಪೋಟಿ ಹೆಚ್ಚಾಗಿದೆ. ಈ ಬಾರಿ ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ ಅವರನ್ನು ಮಾತ್ರ ಯಾವ ಕಾರಣಕ್ಕೂ ಬೆಂಬಲಿಸಬೇಡಿ ಎಂದು ಹಂಗಾಮಿ ಅಧ್ಯಕ್ಷ ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ. ತಮ್ಮ ಪಕ್ಷದ ಸದಸ್ಯರು ತಮಗೆ ಬೆಂಬಲ ನೀಡದಿರುವುದಕ್ಕೆ ರಿಷಿ ಸುನಕ್ ಅವರೇ ಕಾರಣ. ಹೀಗಾಗಿ ರಿಷಿ ಪ್ರಧಾನಿಯಾಗಬಾರದೆಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಯಾವುದೇ ಅಭ್ಯರ್ಥಿಗಳನ್ನೂ ಬೆಂಬಲಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ಜಾನ್ಸನ್ ಈಗ ಸೋತಿರುವ ಅಭ್ಯರ್ಥಿಗಳ ಬಳಿ ರಿಷಿ ಬ್ರಿಟನ್ ಪ್ರಧಾನಿಯಾಗಬಾರದು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್‌ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ.
PublicNext
16/07/2022 11:59 am