ಲಂಡನ್: ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ಗೆ ಬ್ರಿಟನ್ ದೇಶದ ಪ್ರಧಾನಿ ಆಗೋ ಸಾಧ್ಯ ಇದ್ದು, ಈಗಾಗಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನದಿಂದ ಇಳಿಯಲು ಒಪ್ಪಿಗೆ ಸೂಚಿಸಿದ್ದಾರೆ.
ಬೋರಿಸ್ ಜಾನ್ಸನ್ ಆಡಳಿತದ ಬಗ್ಗೆ ಆಡಳಿತಾರೂಡ ಪಕ್ಷವಾಗಿರೋ ಕನ್ಸರ್ವೇಟಿವ್ ಪಕ್ಷದಲ್ಲಿ ಅಸಮಾಧಾನ ಇದ್ದು, ಅದು ಭುಗಿಲೆದ್ದಿದೆ. ಕಳೆದ ಎರಡು ದಿನದಲ್ಲಿ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದಾರೆ.
ಈ ಬೆಳವಣಿಗೆಯಿಂದ ಬೋರಿಸ್ ಜಾನ್ಸನ್ ರಾಜೀನಾಮೆ ಕೊಡೋದು ಅನಿವಾರ್ಯವಾಗಿದೆ. ಇದರ ಬೆನ್ನಲ್ಲಿಯೇ ಬ್ರಿಟನ್ ಪ್ರಧಾನಿ ಯಾರ್ ಆಗ್ತಾರ ಅನ್ನೋ ಕುತೂಹಲವೂ ಈಗ ಹೆಚ್ಚಾಗಿದೆ. ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಹೆಸರು ಸದ್ಯಕ್ಕೆ ಮುಂಚೂಣಿಯಲ್ಲಿಯೇ ಇದೆ.
PublicNext
07/07/2022 03:59 pm