ವಿಶ್ಲೇಷಣೆ- ಪ್ರವೀಣ್ ನಾರಾಯಣ ರಾವ್..
ಬೆಂಗಳೂರು: ರಾಜ್ಯ ಬಿಜೆಪಿಯ ಪಾಲಿಗೆ ನಾಳೆ ಶುಕ್ರವಾರ ನಡೆಯಲಿರುವ ರಾಜ್ಯಕಾರಿಣಿ ಸಭೆ ಅತ್ಯಂತ ಮಹತ್ವವನ್ನು ಪಡೆದಿದೆ.ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ ಎನ್ನುವಾಗಲೇ 40% ಸರ್ಕಾರ ಎಂಬ ಕಾಂಗ್ರೆಸ್ ಆರೋಪ, ಪೇಸಿಎಂ ಪೋಸ್ಟರ್ ಅಭಿಯಾನ, ಇನ್ನೂ ಅನೇಕ ಪ್ರಕರಣಗಳಿಂದ ಜರ್ಜರಿತವಾಗಿರುವ ರಾಜ್ಯ ಬಿಜೆಪಿ ಅದೆಲ್ಲದಕ್ಕೂ ತಕ್ಕ ಉತ್ತರ ಕೊಡಬೇಕಾದ ಅನಿವಾರ್ಯತೆಯಲ್ಲಿದೆ.. ಅದರಲ್ಲೂ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಟಕ್ಕರ್ ಕೊಡುವ ರೀತಿಯಲ್ಲಿ ಬಿಜೆಪಿ ಸಹ ಮೂರು ತಂಡಗಳಲ್ಲಿ ಯಾತ್ರೆ ಹೊರಡಿಸುವ ಪ್ಲ್ಯಾನ್ ಮಾಡಿದೆ..
ಇದಕ್ಕೆ ಸ್ಪಷ್ಟವಾದ ಮಾರ್ಗಸೂಚಿಯನ್ನು ರೂಪಿಸುವ ಕುರಿತು ಸಹ ನಾಳಿನ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ..ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ,ಮುಖ್ಯಂಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ಎಲ್ಲಾ ಶಾಸಕರು, ಸಂಸದರು,ಜಿಲ್ಲಾಧ್ಯಕ್ಷರುಗಳು,ತಾಲೂಕಾಧ್ಯಕ್ಷರುಗಳು,ಪ್ರಮುಖ ಪದಾದಿಕಾರಿಗಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನ ಸಭೆಯಲ್ಲಿ ಭಾಗವಹಿಸಲಿದ್ದಾರೆ.. ಸಭೆಗಾಗಿ ಅರಮನೆ ಮೈದಾನದ ತ್ರಿಪುರವಾಸಿನಿ ಯನ್ನು ಸನ್ನದ್ಧ ಗೊಳಿಸಲಾಗಿದೆ.ಅದರ ಕುರಿತ ವರದಿ ಇಲ್ಲಿದೆ....
PublicNext
06/10/2022 06:29 pm