ಪಾವಗಡ: ಪುರಸಭೆ ಅಧ್ಯಕ್ಷರೇ.. ಉಪಾಧ್ಯಕ್ಷರೇ..20 ಮತ್ತು 17 ನೇ ವಾರ್ಡ್ ಸದಸ್ಯರೇ ಇತ್ತ ಗಮನ ಹರಿಸಿ. ಸದರಿ ವಾರ್ಡ್ ನ ಜನರಿಗೆ ಮುಕ್ತಿ ದೊರಕಿಸಿ ಎಂದು ಇಲ್ಲಿನ ವಾಸಿಗಳು ಕೇಳಿ ಕೊಳ್ಳುತ್ತಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ರಣ ಮಳೆಗೆ ತಾಲ್ಲೂಕಿನಲ್ಲಿ ಕೆರೆಗಳು ತುಂಬಿ ಹರಿ ಯುತ್ತಿವೆ. ಪಟ್ಟಣದಲ್ಲಿ ಹಳ್ಳಗಳು ದೊಡ್ಡ ದೊಡ್ಡ ಚರಂಡಿಗಳ ಮಟ್ಟ ಮೀರಿ ಹರೆಯುತ್ತಿದ್ದ ಸಮಯದಲ್ಲಿ ಪಾವಗಡದ ಪಟ್ಟಣದ ಜೈನ್ ಲೇಔಟ್ ನಲ್ಲಿ ಮಾತ್ರ ಚರಂಡಿಗಳಲ್ಲಿರುವ ಕೊಚ್ಚೆ ಹೆಚ್ಚಿದೆ. ಇಲ್ಲಿನ ವಾಸಿಗಳು ದುರ್ವಾಸನೆ ತಾಳಲಾರದೆ ಮೂಗುಮುಚ್ಚಿಕೊಂಡು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ತಿಂಗಳು ಮೋಜು-ಮಸ್ತಿ ಮುಗಿಸಿದ ಬಂದ ಪುರಸಭೆ ಸದಸ್ಯರುಗಳೇ ದಿನದ 24 ಗಂಟೆ ವಾರ್ಡಿನ ಕೆಲಸ ಮಾಡುತ್ತಿದ್ದೇವೆಂದು ಪುರಸಭೆಯ ಸದಸ್ಯರೊಬ್ಬರು ಮಾಧ್ಯಮಗಳಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದು, ಇದು ಹೇಳಿಕೆಗೆ ಸೀಮಿತವಾಗಿದೆ.ನಿಮ್ಮ ವಾರ್ಡ್ ಗಳಲ್ಲಿ ಕೆಲಸ ಮಾಡಿ ತೋರಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನಾದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇದಕ್ಕೊಂದು ಮುಕ್ತಿ ದೊರಕಿಸಬೇಕಿದೆ.
PublicNext
08/08/2022 10:32 am