ವರದಿ : ಸಂತೋಷ ಬಡಕಂಬಿ
ಅಥಣಿ - ಚುನಾವಣೆಗೂ ಮುನ್ನ ಒಂದು ವರಸೆ, ಚುನಾವಣೆ ಮುಗಿದ ಬಳಿಕ ಮತ್ತೊಂದು ವರಸೆ, ನಿಮ್ಮ ಸಮಸ್ಯೆಯೇ ನಮ್ಮ ಸಮಸ್ಯೆ ಎಂದಿದ್ದ ಅಥಣಿ ಶಾಸಕರು, ಬಣ್ಣದ ಮಾತು ಕೇಳಿ ಸಂತ್ರಸ್ತರು ಓಟ್ ಕೂಡ ಹಾಕಿದ್ರು ಆದ್ರೆ ಓಟ್ ಪಡೆದ ಶಾಸಕರು ಮಾತ್ತ ನಾಪತ್ತೆ.
ಮುರುಕಲು ಮನೆ, ಅದೆ ಮನೆಯಲ್ಲಿ ಅಡುಗೆ ಮಾಡುತ್ತಿರು ತಾಯಿ, ದನದ ಕೊಟ್ಟಿಗೆಯಲ್ಲೆ ಜೀವನ, ಇಂತಹ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ.
ಇತ್ತ ಪ್ರವಾಹ ಬರುತ್ತೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೃಷ್ಣಾ ನದಿಯನ್ನು ನೋಡುತ್ತಿರುವ ಜನತೆ, ಅತ್ತ ನಮಗೆ ಮತಹಾಕಿದ ಜನತೆ ಗೋಳು ಬಗ್ಗೆ ಗೊತ್ತಿಲ್ಲ ಎಂದು ಬೆಂಗಳೂರು, ಬೆಳಗಾವಿಯಲ್ಲಿ ಠಿಕಾಣಿ ಹೂಡಿ ಮಜಾ ಮಾಡುತ್ತಿದ್ದಾರೆ ಶಾಸಕ ಮಹೇಶ ಕುಮಠಳ್ಳಿಯವರು.
ಎರಡೆರಡು ಸಲ ಅವಕಾಶ ಕೊಟ್ಟು ಅವರನ್ನು ಶಾಸಕರನ್ನಾಗಿ ಮಾಡಿದ ಜನತೆಯ ಕಷ್ಟಕ್ಕೆ ಹೆಗಲಾಗಿ ನಿಂತು ಅಭಯ ನೀಡಬೇಕಾದ ಶಾಸಕರು ಮಾತ್ರ ಕ್ಷೇತ್ರದಲ್ಲಿ ಕಾಣಿಸ್ತಾಯಿಲ್ಲ. ಆದರೆ ಜಿಲ್ಲೆಯ ಎಲ್ಲ ಅಧಿಕಾರಿಗಳು ಮಾತ್ರ ಕಾಲಿಗೆ ಚಕ್ರಕಟ್ಟಿಕೊಂಡು ಇಡೀ ಜಿಲ್ಲೆಯನ್ನು ಸುತ್ತು ಹೊಡೆದು ಪ್ರವಾಹ ಸಂಭಾವ್ಯ ಪರಿಸ್ಥಿತಿಯನ್ನು ಅವಲೋಕಿಸಿ ಸಮಸ್ಯೆಗಳು ಆಗಬಾರದೆಂದು ಮುನ್ನೆಚ್ವರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ
ಅಷ್ಟೇ ಅಲ್ಲದೆ ಇವರ ಜೊತೆಯೇ ಕಾಗವಾಡದ ಶಾಸಕರಾದ ಶ್ರೀಮಂತ ಪಾಟೀಲ ಅವರು ಇವತ್ತು ಕ್ಷೇತ್ರದ ವಿವಿಧ ಸ್ಳಳಗಳಿಗೆ ಭೇಟಿ ಕೊಟ್ಟು ಜನರಿಗೆ ಧೈರ್ಯ ತುಂಬುತ್ತಿದ್ದಾರೆ. ಅವರನ್ನು ನೋಡಿಯಾದರೂ ನಮ್ಮ ಶಾಸಕರು ಹೀಗೆ ಮಾಡಲಿ ಎಂದು ಕ್ಷೇತ್ರದ ಹಲವರ ಆಶಯವಾಗಿದೆ.
PublicNext
15/07/2022 06:15 pm