ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆ ಗುಣಮಟ್ಟ ಪರೀಕ್ಷಿಸಿದ ನಿತಿನ್ ಗಡ್ಕರಿ : ವಿಡಿಯೋ ವೈರಲ್

ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಸರ್ಕಾರ, 15 ಲಕ್ಷ ಕೋಟಿ ರೂಪಾಯಿ ವೆಚ್ಚದ ರಸ್ತೆ ನಿರ್ಮಾಣದ ಗುರಿ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆಯೇ ತಿಳಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಅಗ್ರ ಆದ್ಯತೆ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ರಸ್ತೆಯ ಗುಣಮಟ್ಟವನ್ನು ಪರೀಕ್ಷಿಸಲು, ಮತ್ತು ವೇಗ ಮಿತಿಯನ್ನು ಪರೀಕ್ಷಿಸಲು ಸ್ವತಃ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ರಸ್ತೆ ಸಂಚಾರ ನಡೆಸಿ ಕಿಲೋಮೀಟರ್ ವೇಗ ಪರೀಕ್ಷಿಸಿದ್ದಾರೆ.

ಭಾರತದ, 2019-2025 ನೇ ಸಾಲಿನ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ – ಎನ್ ಐಪಿ ಯೋಜನೆ ಮೊದಲನೆಯದಾಗಿದ್ದು, ತನ್ನ ನಾಗರಿಕರಿಗೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಉನ್ನತಿಗೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.

ಇತ್ತ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಖುದ್ದು ಪ್ರಯಾಣಿಕರೊಂದಿಗೆ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ ಮತ್ತು ಜನರ ಕುಂದು ಕೊರತೆಯನ್ನು ಆಲಿಸುತ್ತಾರೆ. ಒಟ್ಟಾರೆಯಲ್ಲಿ ಕಾಮಗಾರಿಗಳನ್ನು ಸಚಿವರುಗಳೇ ಮಾಡುವ ಮೂಲಕ ಕಾಮಗಾರಿಯಗಳನ್ನು ಪರಿಶೀಲಿಸುವ ಪರಿಯನ್ನು ಜನ ಮೆಚ್ಚಿದ್ದಾರೆ.

Edited By : Nirmala Aralikatti
PublicNext

PublicNext

19/09/2021 03:41 pm

Cinque Terre

71.1 K

Cinque Terre

11

ಸಂಬಂಧಿತ ಸುದ್ದಿ