ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ:ಅವೈಜ್ಞಾನಿಕವಾಗಿ ನೆರೆ ಸಂತ್ರಸ್ತರ ಗ್ರಾಮ ಸ್ಥಳಾಂತರ; ರಸ್ತೆ ತಡೆದು ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ನೆರೆ ಸಂತ್ರಸ್ತರನ್ನು ಅವೈಜ್ಞಾನಿಕವಾಗಿ ಸ್ಥಳಾಂತರಕ್ಕೆ ಮುಂದಾಗಿರುವ ನಡೆಯನ್ನು ವಿರೋಧಿಸಿ ಜಮಖಂಡಿ ಅಥಣಿ ಮುಖ್ಯ ರಸ್ತೆ ಮಾರ್ಗ ತಡೆಯಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸರಿ ಸುಮಾರು 100 ಕ್ಕೂಹೆಚ್ಚು ಸಂತ್ರಸ್ತರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದು, ಒಂದು ಕಿಲೋ ಮೀಟರ್ ಅಂತರ ಟ್ರಾಫಿಕ್ ಜಾಮ್ ಉಂಟಾಗಿತ್ತು.ನಂತರ ಟೈಯರ್ ಗೆ ಬೆಂಕಿ ಹಂಚಿ ರಸ್ತೆ ತಡೆಯಿಡಿದ ಪ್ರತಿಭಟನಕಾರರು

ಟ್ರಾಕ್ಟರ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಭಜನೆ ಮಾಡುವುದರ ಮೂಲಕ ವಿಭಿನ್ನವಾಗಿ ಆಕ್ರೋಶ ಹೊರಹಾಕಿದರು.

ಪ್ರತಿ ಕ್ಷಣಕ್ಕೂ ಪ್ರತಿಭಟನೆ ಕಾವು ತೀವ್ರವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಥಣಿ ಪೋಲಿಸರು ಸ್ಥಳದಲ್ಲಿ ಜಮಾವಣೆಯಾಗಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು. ಪಟ್ಟು ಬಿಡದ ಗ್ರಾಮಸ್ಥರು ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬರುವಂತೆ ಒತ್ತಾಯಿಸಿದಲ್ಲದೇ, ಮನವಿ ಕೈಗೂಡದೇ ಇದ್ದಲ್ಲಿ ನಿರಂತರವಾಗಿ ಹೋರಾಟ ಮಾಡುವುದಾಗಿ ಬಿಸಿ ಮುಟ್ಟಿಸಿದರು.ನಂತರ ಅಥಣಿ ಪೋಲಿಸರ ಮಧ್ಯ ಪ್ರವೇಶದಿಂದ ಪ್ರತಿಭಟನಾಕಾರರ ಮನವರಿಕೆ ಮಾಡಲಾಯಿತು.

Edited By : Nagesh Gaonkar
PublicNext

PublicNext

01/09/2021 05:45 pm

Cinque Terre

58.79 K

Cinque Terre

0

ಸಂಬಂಧಿತ ಸುದ್ದಿ