ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಜ್ರಿವಾಲ್ ನಾಡಿನ ಅವಸ್ಥೆ ಬಗ್ಗೆ ಟೀಕಿಸಿದ ಬಿಜೆಪಿ

ನವದೆಹಲಿ: ರಸ್ತೆಯ ಮಧ್ಯೆದಲ್ಲಿ ದೊಡ್ಡ ಹೊಂಡವೊಂದು ಕಾಣಿಸಿಕೊಂಡು ಸಂಚಾರಕ್ಕೆ ತೀರಾ ತೊಂದರೆಯಾದ ಘಟನೆ ನವದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿರುವ ಐಐಟಿ ದೆಹಲಿ ಫ್ಲೈಓವರ್ ಕೆಳಗೆ ಶನಿವಾರ ನಡೆದಿದೆ.

ದೆಹಲಿ ಜಲ ಮಂಡಳಿಗೆ ಸಂಪರ್ಕ ಹೊಂದಿರುವ ಒಳಚರಂಡಿಯಲ್ಲಿ ಈ ರೀತಿ ಹೊಂಡ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದೆ.

ಈ ಬಗ್ಗೆ ಬಿಜೆಪಿ ಮುಖಂಡರು ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕಾಲೆಳೆಯಲಾರಂಭಿಸಿದ್ದಾರೆ. “ದೆಹಲಿ ಸರ್ಕಾರದ ಪಿಡಬ್ಲ್ಯುಡಿ ಇಲಾಖೆಯು ರಸ್ತೆಯಲ್ಲಿ ಸಾರ್ವಜನಿಕರಿಗಾಗಿ ಸಾವಿನ ಬಾವಿಗಳನ್ನೂ ತೋಡಿಸಿದೆ. ಕೇಜ್ರಿವಾಲ್ ಅವರ ವಿಶ್ವ ದರ್ಜೆಯ ದೆಹಲಿ ಮಾದರಿಯನ್ನು ನೋಡಿ” ಎಂದು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಅವರು ಹೌಜ್ ಖಾಸ್ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

01/08/2021 09:14 am

Cinque Terre

102.35 K

Cinque Terre

13

ಸಂಬಂಧಿತ ಸುದ್ದಿ