ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ನಿರಂತರ ವಿದ್ಯುತ್ ಗಾಗಿ ನೂರಾರು ಅನ್ನದಾತರಿಂದ ಟ್ರ್ಯಾಕ್ಟರ್ ರ್‍ಯಾಲಿ

ಗದಗ: ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಉಣಚಗೇರಿ ಇದು ಗಜೇಂದ್ರಗಡ ಪುರಸಭೆ ವ್ಯಾಪ್ತಿಯ 23ನೇ ವಾರ್ಡ್ ಗೆ ಒಳಪಡುತ್ತೆ. ಉಣಚಗೇರಿ ಕಾಲೋನಿಗೆ 24/7 ವಿದ್ಯುತ್ ಪೂರೈಕೆ ಇದೆ. ಆದ್ರೆ ಕಳೆದೊಂದು ವಾರದಿಂದ ಆ ಭಾಗದ ರೈತರ ಪಂಪ್ ಸೆಟ್ ಗೆ 24/7 ಕರೆಂಟ್ ಬಂದ್ ಮಾಡಲಾಗಿದೆ.

ಕೇವಲ 7 ಗಂಟೆ ಮಾತ್ರ ಪೂರೈಕೆ ಮಾಡಲಾಗ್ತಿದೆ. ಆದ್ದರಿಂದ ಉಣಚಗೇರಿ ಭಾಗದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಮಾಜಿ ಶಾಸಕ ಜಿ.ಎಸ್. ಪಾಟೀಲ ಹಾಗೂ ಕೆಲವು ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.

ಇಂದು ಗಜೇಂದ್ರಗಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಟ್ರ್ಯಾಕ್ಟರ್ ಗಳ ಮೂಲಕ ರ್‍ಯಾಲಿ ಮಾಡಿದರು.ಸಿಟಿಗೆ ಹೊಂದಿಗೆಕೊಂಡಿರುವ ರೈತರಿಗೂ ಉಚಿತ 24/7 ವಿದ್ಯುತ್ ಪೂರೈಸುವಂತೆ ಆಗ್ರಹಿಸಿದರು.ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ತಾಲೂಕಿನ ನೂರಾರು ಟ್ರ್ಯಾಕ್ಟರ್ ಗಳ ಮೂಲಕ ಸಾವಿರಾರು ರೈತರು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Edited By : Manjunath H D
PublicNext

PublicNext

05/09/2022 07:05 pm

Cinque Terre

40.93 K

Cinque Terre

0

ಸಂಬಂಧಿತ ಸುದ್ದಿ