ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಮಗನನ್ನು ಕಂಡ್ರೆ ಸರ್ಕಾರಕ್ಕೆ ಬಲು ಪ್ರೀತಿ : ಡಿಕೆಶಿ ತಾಯಿ ಗೌರಮ್ಮ

ರಾಮನಗರ: ಇಂದು ಬೆಳಿಗ್ಗೆ ದೊಡ್ಡ ಆಲಹಳ್ಳಿ ಗ್ರಾಮದ ಮನೆಗೆ ಎಂಟ್ರಿ ಕೊಟ್ಟ ಸಿಬಿಐ ಅಧಿಕಾರಿಗಳು ಏಕಾಏಕಿ ಪ್ರಮುಖ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.

ಹೀಗೆ ಅಧಿಕಾರಿಗಳು ಪರಿಶೀಲನೆ ಆರಂಭಿಸುತ್ತಿದ್ದಂತೆ ಗರಂ ಆದ ಡಿಕೆಶಿ ತಾಯಿ ಗೌರಮ್ಮ ನಮ್ಮ ಮನೆಯಲ್ಲಿ ಏನ್ ಇರತಪ್ಪಾ ಬೇಕಾದ್ರೆ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ ಎಂದಿದ್ದಾರೆ.

ಮಗನ ಮನೆ ಮೇಲೆ ಸಿಬಿಐ ದಾಳಿ ಕುರಿತು ಕೋಡಿಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ.

ಅದಕ್ಕಾಗಿಯೇ ಆಗಾಗ್ಗೆ ಅವನನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು.

ದೊಡ್ಡ ಆಲಹಳ್ಳಿ ಗ್ರಾಮದ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ತಿರುಗುತ್ತಾರೆ.

ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು ಎಂದು ಹೇಳಿದರು.

Edited By : Nirmala Aralikatti
PublicNext

PublicNext

05/10/2020 01:21 pm

Cinque Terre

64.48 K

Cinque Terre

3

ಸಂಬಂಧಿತ ಸುದ್ದಿ