ಕುಂದಾಪುರ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದವರು ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿ! ಹೌದು ,ಇಂತಹದ್ದೊಂದು ಅದೃಷ್ಟ ಆನಂದ ಪೂಜಾರಿ ದಂಪತಿಯದ್ದು.ಇದೇ ಮೊದಲೇನಲ್ಲ ,ಮೋದಿಯವರು ಈ ಹಿಂದೆ ಅಮೇರಿಕಾಕ್ಕೆ ಹೋಗಿದ್ದಾಗಲೂ ಈ ದಂಪತಿ ಆತಿಥ್ಯ ನೀಡಿದ್ದುಂಟು ,ಸದ್ಯ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾದಲ್ಲಿದ್ದು ಮೂರನೇ ಬಾರಿಗೆ ದೇಶದ ಪ್ರಧಾನಿಗೆ ಆತಿಥ್ಯ ನೀಡುವ ಅಪರೂಪದ ಅವಕಾಶ ಆನಂದ ಪೂಜಾರಿಯವರಿಗೆ ಒದಗಿ ಬಂದಿದೆ.
ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ಯುಎಸ್ ನ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ ಮೂರು ದಶಕಗಳಿಂದ ನೆಲೆಸಿದ್ದಾರೆ.ಅಲ್ಲಿ ಭವ್ಯ ವುಡ್ ಲ್ಯಾಂಡ್ಸ್ ಹೊಟೇಲ್ ನಡೆಸುತ್ತಿದ್ದಾರೆ. ಮೊನ್ನೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವನ್ನು ಈ ದಂಪತಿ ಪಡೆದಿದ್ದಾರೆ.
ಪ್ರಧಾನಿ ಮೋದಿಯವರು ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಊಟಕ್ಕೆ ಆದ್ಯತೆ ನೀಡುತ್ತಿದ್ದು, ದಕ್ಷಿಣ ಭಾರತೀಯ ಖಾದ್ಯಗಳಿಗೆ ಮಾರುಹೋಗಿದ್ದಾರೆ ಎನ್ನುತ್ತಾರೆ ಆನಂದ ಪೂಜಾರಿ ಅವರು.
ಮೂಲತಃ ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರರಾದ ಇವರು, ಅಮೆರಿಕದಲ್ಲಿ ನೆಲೆಸಿದ್ದರೂ ಊರಿಗೆ ಆಗಾಗ ಬರುತ್ತಿರುತ್ತಾರೆ.
PublicNext
26/09/2021 11:39 am