ಅಹ್ಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಾಧವ್ ಸಿಂಗ್ ಸೋಲಂಕಿ 94 ವಿಧಿವಶರಾಗಿದ್ದಾರೆ.
4 ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸೋಲಂಕಿ ಕಾಂಗ್ರೆಸ್ ಪಕ್ಷ ಪ್ರಭಾವಿ ನಾಯಕರಾಗಿದ್ದರು.
1980ಕ್ಕೂ ಮೊದಲು ಖಾಮ್ ಹೋರಾಟ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ)ದ ಮೂಲಕ ರಾಜಕೀಯ ಆರಂಭಿಸಿದ್ದ ಸೋಲಂಕಿ ಅವರು ಗುಜರಾತ್ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದರು ಭಾರತದ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
1977 ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದರು. 1980 ರ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು 182 ಸ್ಥಾನಗಳಲ್ಲಿ 141 ಸ್ಥಾನಗಳನ್ನು ಗಳಿಸಿತು ಮತ್ತು ಅಂದು ಬಿಜೆಪಿ ಕೇವಲ ಒಂಬತ್ತು ಸ್ಥಾನಗಳನ್ನು ಗಳಿಸಿತು.
PublicNext
09/01/2021 09:20 am