ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಮ್ ಮಾಡೋರಿಗೆ ಹೊಸ ಮಾರ್ಗಸೂಚಿ: ಆರೋಗ್ಯ ಸಚಿವ ಸುಧಾಕರ್

ಚಿಕ್ಕಬಳ್ಳಾಪರು: ರಾಜ್ಯದ ಆರೋಗ್ಯ ಸಚಿವ ಸುಧಾಕರ್ ಜಿಮ್ ಪ್ರಿಯ ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.ಪುನೀತ್ ಸಾವಿನಿಂದ ಆದ ಆತಂಕ ಮತ್ತು ಗೊಂದಲಭರಿತ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಕರ್ನಾಟಕದ ಎಲ್ಲ ಜಿಮ್ ಗಳಿಗೂ ಮಾರ್ಗಸೂಚಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡೋದು ಸರಿಯೇ ಅಥವಾ ತಪ್ಪೋ ಎನ್ನುವ ಗೊಂದಲ ಈಗ ಶುರು ಆಗಿದೆ. ಪುನೀತ್ ಸಾವಿನ ಬೆನ್ನಲ್ಲಿಯೆ ಈ ಪ್ರಶ್ನೆ ಹುಟ್ಟಿಕೊಂಡಿದೆ. ಈ ಕುರಿತು ಸಾಮಾಜಿ ತಾಣದಲ್ಲೂ ಚರ್ಚೆಗಳು ನಡೆಯುತ್ತಿವೆ. ಸ್ವತಃ ಆರೋಗ್ಯ ಸಚಿವರಿಗೂ ಯುವಕರು ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಅದಕ್ಕೇನೆ ಸಚಿವರು ಈಗೊಂದು ಐಡಿಯಾ ಮಾಡಿದ್ದಾರೆ. ದೇಶ-ವಿದೇಶದ ತಜ್ಞ ವೈದ್ಯರ ಅಭಿಪ್ರಾಯಗಳೆಲ್ಲವನ್ನೂ ತೆಗೆದುಕೊಂಡು ಮಾರ್ಗಸೂಚಿ ಮಾಡುತ್ತಿದ್ದಾರೆ. ಅದು ಕರ್ನಾಟಕದ ಜಿಮ್ ಗಳಿಗೆ ಅತೀಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಹಾಗಂತ ಸ್ವತಃ ಆರೋಗ್ಯ ಸಚಿವರು ಚಿಕ್ಕಬಳ್ಳಾಪುರದಲ್ಲಿಂದು ಹೇಳಿದ್ದಾರೆ.

Edited By :
PublicNext

PublicNext

31/10/2021 06:49 pm

Cinque Terre

42.68 K

Cinque Terre

1

ಸಂಬಂಧಿತ ಸುದ್ದಿ